ರುಪಾಯಿ ಮೌಲ್ಯ ಮತ್ತೆ ದಾಖಲೆಯ ಕುಸಿತ, 71.10 ರು.ಇಳಿಕೆ

ಮುಂಬೈ: ಅಮೆರಿಕದ ಡಾಲರ್ ಎದುರು ಭಾರತದ ರುಪಾಯಿ ವಿನಿಮಯ ಮೌಲ್ಯ ಸೋಮವಾರ ಮತ್ತೆ ದಾಖಲೆಯ ಕುಸಿತ ಕಂಡಿದ್ದು, 71.10 ರುಪಾಯಿಗೆ ತಲುಪಿದೆ.
ಇಂದು ಮಧ್ಯಾಹ್ನದ ವಹಿವಾಟಿನಲ್ಲಿ ಡಾಲರ್ ಎದುರು 10 ಪೈಸೆಯಷ್ಟು ಇಳಿಕೆಯಾಗುವ ಮೂಲಕ 71.10ರುಪಾಯಿಗೆ ತಲುಪಿದೆ.
ಟರ್ಕಿ ಕರೆನ್ಸಿ ಲಿರಾ ಕುಸಿತದಿಂದಾಗಿ ಡಾಲರ್‌ ಎದುರು ರುಪಾಯಿ ಮೌಲ್ಯ ಪದೆಪದೇ ಕುಸಿಯುತ್ತಿದ್ದು, ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.
ಆಗಸ್ಟ್ 31ರಂದು ಡಾಲರ್ ಎದುರು ರುಪಾಯಿ ಮೌಲ್ಯ 71 ರುಪಾಯಿಗೆ ಇಳಿಕೆಯಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. ಈಗ ಮತ್ತೊಂದು ದಾಖಲೆ ನಿರ್ಮಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 0.57 ರಷ್ಟು ಏರಿಕೆಯಾಗುವ ಮೂಲಕ ಪ್ರತಿ ಬ್ಯಾರಲ್ ಗೆ 78.8 ಅಮೆರಿಕನ್ ಡಾಲರ್ ಗೆ ತಲುಪಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ