ಸ್ಥಳೀಯ ಸಂಸ್ಥೆಗಳು ಒಟ್ಟು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಅತಂತ್ರ
ಮಹಾನಗರ ಪಾಲಿಕೆ 3 1 0 0 2
ನಗರಸಭೆ 29 10 5 3 11
ಪುರಸಭೆ 53 12 19 08 14
ಪಟ್ಟಣ ಪಂಚಾಯತ್ 20 07 07 02 04
ಬೆಂಗಳೂರು, ಸೆ.3- ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾಫಲಿತಾಂಶದಲ್ಲಿ ಹಲವು ವೈಶಿಷ್ಟ್ಯತೆಗಳು ನಡೆದಿದೆ.
1 ಮತದ ಗೆಲುವು
ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಕಾಂಗ್ರೆಸ್ ಅಭ್ಯರ್ಥಿ ಪುನೀತ್ ಪೂಜಾರಿ ಬಿಜೆಪಿ ಅಭ್ಯರ್ಥಿ ಕರುಣಾಕರ ಅವರ ವಿರುದ್ಧ ಒಂದು ಮತದಿಂದ ಜಯಗಳಿಸಿದ್ದಾರೆ.
ಅದೇ ರೀತಿ, ಕೊಪ್ಪಳ ನಗರಸಭೆಯ ವಾರ್ಡ್ ಐದರಲ್ಲಿ ಬಿಜೆಪಿಯ ವಿದ್ಯಾ ಸುನೀಲ್ ಹೆಸರೂರು ಅವರು ಕಾಂಗ್ರೆಸ್ನ ರೇಣುಕಾ ಕಲ್ಲೇಶಪ್ಪ ಪೂಜಾರ್ ಅವರ ವಿರುದ್ಧ ಒಂದು ಮತದಿಂದ ಜಯಗಳಿಸಿದ್ದಾರೆ.
ಹೊಸದುರ್ಗ ಪುರಸಭೆಯ 29ನೇ ವಾರ್ಡ್ನ ಬಿಜೆಪಿ ಅಭ್ಯರ್ಥಿ ರಾಮಚಂದ್ರ ಅವರು ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ದಂಪತಿಗೆ ಗೆಲುವು
ಚಿತ್ರದುರ್ಗ ನಗರಸಭೆಗೆ ದಂಪತಿಗಳು ಆಯ್ಕೆಯಾಗಿದ್ದಾರೆ. ಮಂಜುನಾಥ್ ಗೊಪ್ಪೆ ಮತ್ತು ಜಯಂತಿ ದಂಪತಿ ಹಾಗೂ ವೆಂಕಟೇಶ್ ಹಾಗೂ ತಿಪ್ಪಮ್ಮ ದಂಪತಿ ಜಯಗಳಿಸಿದ್ದಾರೆ.
ಪಿಎಚ್ಡಿ ಪದವೀಧರೆಗೆ ಜಯ
ಮೈಸೂರು ಪಾಲಿಕೆ ಚುನಾವಣೆಯಲ್ಲಿ ಪಿಎಚ್ಡಿ ಪದವೀಧರೆ ಡಾ.ಅಶ್ವಿನಿ ಶರತ್ ಜಯಗಳಿಸಿದ್ದಾರೆ. 65ನೇ ವಾರ್ಡ್ನಿಂದ ಇವರು ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ.
ಅದೃಷ್ಟದಫಲಿತಾಂಶ
ಉಳ್ಳಾಲ ನಗರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಟಾಸ್ ಮೂಲಕ ಗೆಲುವು ಲಭಿಸಿದೆ. ಇಲ್ಲಿ ಕಾಂಗ್ರೆಸ್ನ ದಿನೇಶ್ ರೈ ಹಾಗೂ ಬಿಜೆಪಿಯ ರಾಜೇಶ್ ಅವರಿಗೆ ತಲಾ 370 ಮತಗಳು ಲಭಿಸಿದ್ದವು. ಅಂತಿಮವಾಗಿ ಚುನಾವಣಾಧಿಕಾರಿ ಟಾಸ್ ಹಾಕಿದಾಗ ಬಿಜೆಪಿಯ ರಾಜೇಶ್ ಅವರಿಗೆ ಗೆಲುವು ಲಭಿಸಿದೆ.