ಮೈಸೂರು,ಸೆ.3-ನಾಡಹಬ್ಬ ದಸರಾ ಮಹೋತ್ಸವು ಅ.10ರಿಂದ ಆರಂಭವಾಗಲಿದ್ದು, ಅದಕ್ಕಾಗಿ ಆಕರ್ಷಣೀಯ ಕೇಂದ್ರಗಳಲ್ಲೊಂದಾದ ಕುಪ್ಪನ ಪಾರ್ಕ್ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಕಲ ಸಿದ್ದತೆ ನಡೆದಿದೆ.
ಈ ಬಾರಿ ಅ.10ರಿಂದ 21ರವರೆಗೂ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, 80 ಸಾವಿರಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿ ವಿವಿಧ ರೀತಿಯ ಗಿಡಗಳನ್ನು ಬೆಳೆಸಲಾಗಿದೆ. ಈ ಕುಂಡಗಳನ್ನು ಬಳಸಿ ವಿವಿಧ ಆಕೃತಿಗಳನ್ನು ಸಿದ್ದಪಡಿಸಲಾಗುತ್ತಿದೆ.
ವಿವಿಧ ಬಣ್ಣಗಳ ಹೂವುಗಳು ನೋಡುಗರನ್ನು ಸೆಳೆಯಲಿದೆ. ವರ್ಭನ್, ಬಿಗೊನಿಯ, ಡಾಲಿಯ, ಫ್ರೆಂಚ್ ಮೇರಿ ಗೌಲ್ಡ್, ಜೀನಿಯಾ ಸೇರಿದಂತೆ 40ಕ್ಕೂ ಹೆಚ್ಚು ತಳಿಯ ಗಿಡಗಳನ್ನು ಈ ಬಾರಿ ಪ್ರದರ್ಶನಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಈ ಗಿಡಗಳು 150 ದಿನಗಳ ನಂತರ ನಯವಾಗಿ ಹೂವು ಬಿಡಲಾರಂಭಿಸುತ್ತದೆ. ಹಾಗಾಗಿ ಏಪ್ರಿಲ್, ಮೇ ತಿಂಗಳಲ್ಲಿ ಈ ತಳಿಯ ಬೀಜವನ್ನು ನೆಟ್ಟು ಪೆÇೀಷಿಸಲಾಗಿದೆ. ದಸರಾ ವೇಳೆಗೆ ಹೂವು ಬಿಡುತ್ತವೆ.
ಈ ಬಾರಿಯಫಲಪುಷ್ಪ ಪ್ರದರ್ಶನದಲ್ಲಿ 3.5 ಲಕ್ಷ ಗುಲಾಬಿ ಹೂವುಗಳನ್ನು ಬೆಳೆಸಿ ಅದರಿಂದ ಸೋಮನಾಥಪುರದ ಚನ್ನಕೇಶವ ದೇವಾಲಯ ಹಾಗೂ ದೊಡ್ಡ ಗಡಿಯಾರ ಸೇರಿದಂತೆ ವಿವಿಧ ಕಲಾಕೃತಿಗಳನ್ನು ಮಾಡಲಾಗುತ್ತಿದೆ.
ಗ್ಲಾಸ್ ಹೌಸ್ ಸಹ ಸಿದ್ದವಾಗಿದ್ದುಘಿ, ಇಲ್ಲು ಕೂಡ ವಿವಿಧ ರೀತಿಯ ಹೂವುಗಳು ಪ್ರವಾಸಿಗರನ್ನು ಆಕರ್ಷಿಸಲಿದೆ.