ಡಬ್ ಸ್ಮ್ಯಾಶ್ ನಲ್ಲಿ ದಾಖಲೆ ಬರೆದ ‘ಅಯೋಗ್ಯ’

ಬೆಂಗಳೂರು: ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಾರೀ ಹವಾ ಸೃಷ್ಟಿಸುತ್ತಿದೆ. ಏನಮ್ಮೀ ಏನಮ್ಮಿ ಎಂಬ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ವಿಜಯ್ ಪ್ರಕಾಶ್ ಮತ್ತು ಪಲಾಕ್ ಮುಚ್ಚಲ್ ಹಾಡಿರುವ ಈ ಸಾಂಗ್ ಗೆ ಅರ್ಜುನ್ಯ ಜನ್ಯ  ಸಂಗೀತ ನೀಡಿದ್ದು, ಯೂ ಟ್ಯೂಬ್ ನಲ್ಲಿ  12 ಮಿಲಿಯನ್  ಮಂದಿ ವೀಕ್ಷಿಸಿದ್ದಾರೆ, ಡಬ್ ಸ್ಮ್ಯಾಶ್  ವಿಡಿಯೋವನ್ನು 1.5 ಲಕ್ಷ ಮಂದಿ ವೀಕ್ಷಿಸಿದ್ದಾರೆ.
ಸಾಮಾನ್ಯವಾಗಿ ಡಬ್ ಸ್ಮ್ಯಾಶ್ ವಿಡಿಯೋ ವನ್ನು 50 ಸಾವಿರ ಮಂದಿ ವೀಕ್ಷಿಸುತ್ತಾರೆ, ಆದರೆ ಏನಮ್ಮಿ ಏನಮ್ಮಿ ಹಾಡು ಇದನ್ನೆಲ್ಲಾ ಮೀರಿದೆ. ಇದರ ಕ್ಯಾಚಿ ಲಿರಿಕ್ಸ್ ಈ ಪ್ರಮಾಣದಲ್ಲಿ  ಹೆಚ್ಚಲು ಕಾರಣ, ಡ್ಯಾನ್ಯ್ ವಿಡಿಯೋ ಕೂಡ 3 ರಿಂದ 4 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ