ನವದೆಹಲಿ: ಭಾರತ-ಅಮೆರಿಕಾ 2 + 2 ಮಾತುಕತೆ ಹಿನ್ನೆಲೆಯಲ್ಲಿ ಗುಪ್ತಚರ ಹಂಚಿಕೆಯಲ್ಲಿ ಭಯೋತ್ಪಾದನೆ ವಿರೋಧಿ ಸಹಕಾರ, ಭಯೋತ್ಪಾದನೆ ಹಣಕಾಸು ಮತ್ತು ಸೈಬರ್ ಭದ್ರತೆ ಸೇರಿದಂತೆ ಆರು ಅಂಶಗಳ ಕುರಿತು ಉಭಯ ದೇಶಗಳ ಭದ್ರತಾ ವ್ಯವಸ್ಥೆಯ ಉನ್ನತ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ಇತ್ತೀಚಿಗೆ ನಡೆದ ಇಂಡೋ- ಯುಎಸ್ ಸ್ವದೇಶ ಭದ್ರತಾ ಮಾತುಕತೆ ವೇಳೆಯಲ್ಲಿ ಆರು ಉಪ ಗುಂಪುಗಳ ಕಾರ್ಯಗಳಿಗೆ ಸಂಬಂಧಿಸಿದಂತೆ ಕರಡು ಕಾರ್ಯ ಯೋಜನೆ ರೂಪಿಸುವ ಉದ್ದೇಶ ಹಿರಿಯ ಅಧಿಕಾರಿಗಳದಾಗಿತ್ತು ಎಂದು ತಿಳಿದುಬಂದಿದೆ.
* ಅನಧಿಕೃತ ಹಣಕಾಸು, ಹಣದ ಅಕ್ರಮ ಕಳ್ಳಸಾಗಣೆ, ಹಣಕಾಸು ವಂಚನೆ ಮತ್ತು ಖೋಟಾನೋಟು ಸಾಗಾಟ
* ಸೈಬರ್ ಮಾಹಿತಿ
* ಫೆಡರಲ್ ರಾಜ್ಯ ಮತ್ತು ಸ್ಥಳೀಯ ಪಾಲುದಾರರ ನಡುವೆ ಮಾಹಿತಿಯ ಹಂಚಿಕೆ,
* ಜಾಗತಿಕ ಸರಬರಾಜು ಸರಪಳಿ, ಸಾರಿಗೆ, ಬಂದರು, ಗಡಿ ಮತ್ತು ಕಡಲ ಭದ್ರತೆ
* ಸಾಮರ್ಥ್ಯ ನಿರ್ಮಾಣ
* ತಂತ್ರಜ್ಞಾನ ಸುಧಾರಣೆ. ಇತ್ತೀಚಿನ ಭೇಟಿಯ ವೇಳೆ ಭಯೋತ್ಪಾದನೆ ಉಪಕ್ರಮಗಳು ಮತ್ತು ಗುಪ್ತಚರ ಹಂಚಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ಸಹಕಾರ ಒತ್ತಡದ ಬಗ್ಗೆ ಚರ್ಚೆ ನಡೆಸಲಾಗಿದೆ ಉಭಯ ದೇಶಗಳ ನಡುವೆ ಭದ್ರತಾ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕಾದ ಸ್ವದೇಶಿ ಭದ್ರತಾ ಇಲಾಖೆಯ ಅಧೀನ ಉಪ ಕಾರ್ಯದರ್ಶಿ ಜೆಮ್ಸ್ ಮೆಕ್ಯಾಮೆಟ್ ನೇತೃತ್ವದ ನಿಯೋಗ ವಹಿಸಿದ್ದರೆ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಜನಿ ಸೆಖ್ರಿ ಸಿಬಲ್ ಭಾರತ ನಿಯೋಗದ ನೇತೃತ್ವ ವಹಿಸಿದ್ದರು.