ಬೆಂಗಳೂರು, ಸೆ.2- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಶಿವಮೂರ್ತಿ ನಾಯಕ್ ಅವರಿಗೆ ಚಿತ್ರದುರ್ಗದಿಂದ ಲೋಕಸಭಾ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಲಂಬಾಣಿ ಜನಾಂಗದ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುಂಭಾಗ ಲಂಬಾಣಿ ನೃತ್ಯ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಕಚೇರಿ ಮುಂಭಾಗ ಬಾಜಾಭಜಂತ್ರಿ, ಲಂಬಾಣಿ ಸಾಂಪ್ರದಾಯಿಕ ಉಡುಗೆಯಲ್ಲಿ ನೃತ್ಯ ಮಾಡುವ ಮೂಲಕ ಕಾರ್ಯಕರ್ತರು ಗಮನ ಸೆಳೆದರು. ಹಾಲಿ ಸಂಸದ ಚಂದ್ರಪ್ಪ ಬದಲು ಶಿವಮೂರ್ತಿ ನಾಯಕ್ ಅವರಿಗೆ ಟಿಕೆಟï ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಶಿವಮೂರ್ತಿ ನಾಯಕ್, ಮಾಜಿ ಸಚಿವನಾಗಿ ಚಿತ್ರದುರ್ಗ ಜಿಲ್ಲೆಯನ್ನು ಬಲ್ಲವನಾಗಿದ್ದು ಜೊತೆಗೆ ನಮ್ಮ ಸಮುದಾಯದ ಪರವಾಗಿ ಲೋಕಸಭೆಯಲ್ಲಿ ಮಾತನಾಡುವ ಸಾಮಥ್ರ್ಯವನ್ನು ಹೊಂದಿದ್ದೇನೆ. ಚಿತ್ರದುರ್ಗದಿಂದ ಲೋಕಸಭೆಗೆ ನಾನೇ ಸೂಕ್ತ ಎಂದು ಕಾರ್ಯಕರ್ತರು ನಂಬಿದ್ದಾರೆ. ಸಮುದಾಯದವರ ಪರ ದನಿ ಎತ್ತಿ ಹಿಡಿಯುತ್ತೇನೆ ಎಂದು ಹೇಳಿದರು.
ಚಿತ್ರದುರ್ಗದ ಪ್ರಗತಿಗಾಗಿ ತಾವು ಸಾಕಷ್ಟು ಶ್ರಮಿಸಿದ್ದು ಟಿಕೆಟï ನೀಡಿದರೆ ಗೆಲ್ಲುವ ವಿಶ್ವಾಸವಿದೆ ಎಂಬ ಆಶಯವನ್ನು ಶಿವಮೂರ್ತಿ ನಾಯಕ್ ವ್ಯಕ್ತಪಡಿಸಿದರು.
ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಚಿತ್ರದುರ್ಗದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಎಐಸಿಸಿ ಅಧ್ಯಕ್ಷ ರಾಹುಲï ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.