ಸೌಥಾಂಪ್ಟನ್: ಆರಂಭದಲ್ಲಿ ಆಘಾತಗಳ ಮೇಲೆ ಆಘಾತ ಅನುಭವಿಸಿದ ಹೊರತಾಗಿಯೂ ಸ್ಫೋಟಕ ಬ್ಯಾಟ್ಸ್‍ಮನ್ ಜೋಸ್ ಬಟ್ಲರ್ ಅವರ ಆರ್ಧ ಶತಕದ ನೆರವಿನಿಂದ ಆತಿಥೇಯ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾಕ್ಕೆ ತಿರುಗೇಟು ನೀಡಿತು. ದಿನದ ಅಂತ್ಯದಲ್ಲಿ ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತು.
ಮೂರನೇ ದಿನದಾಟದ ಆರಂಭದಲ್ಲಿ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಆಲೆಸ್ಟರ್ ಕುಕ್ (12), ಮೊಯಿನ್ ಅಲಿ (9), ಕಿಟಾನ್ ಜೆನ್ನಿಂಗ್ಸ್ (36), ಜೋ ರೂಟ್ (48), ಜಾನಿಭೈರ್ ಸ್ಟೋ(0), ಬೆನ್‍ಸ್ಟೋಕ್ಸ್ (30), ಜೋಸ್ ಬಟ್ಲರ್(69),ಆದೀಲ್ ರಶೀದ್ (11), ಸ್ಯಾಮ್ ಕರನ್ ಅಜೇಯ 37 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಒಟ್ಟು 233 ರನ್‍ಗಳ ಮುನ್ನಡೆ ಪಡೆದಿದೆ.
ಆಂಗ್ಲರನ್ನ ಬಹುಬೇಗ ಔಟ್ ಮಾಡುವ ಟೀಂ ಇಂಡಿಯಾದ ಲೆಕ್ಕಚಾರಗಳು ಉಲ್ಟಾ ಹೊಡೆಯಿತು. ನಾಲ್ಕನೆ ದಿನ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಆಂಗ್ಲರನ್ನ ಬೇಗನೆ ಔಟ್ ಮಾಡಿ ಎಚ್ಚರಿಕಯಿಂದ ಆಡಬೇಕಿದೆ.