ಮುಂಬೈ: ಮುಂದಿನ ತಿಂಗಳು ನಡೆಯಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟಿಸಲಾಗಿದೆ. ದುಬೈನಲ್ಲಿ ನಡೆಯಲಿರೋ ಈ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು. ಹಂಗಾಮಿ ನಾಯಕನಾಗಿ ರೋಹಿತ್ ಶರ್ಮಾ ತಂಡವನ್ನ ಮುನ್ನಡೆಸಲಿದ್ದಾರೆ. ಉಪ-ನಾಯಕನಾಗಿ ಡೆಲ್ಲಿ ಡ್ಯಾಶರ್ ಶಿಖರ್ ಧವನ್ ಕಾರ್ಯನಿರ್ವಹಿಸಲಿದ್ದಾರೆ. ತಂಡಕ್ಕೆ ಸ್ಫೋಟಕ ಬ್ಯಾಟ್ಸ್ ಮನ್ ಅಂಬಾಟಿ ರಾಯ್ಡು ತಂಡಕ್ಕೆ ಮತ್ತೆ ಮರಳಿದಾರೆ. ಕೆಲವು ತಿಂಗಳ ಹಿಂದೆ ಯೋ ಯೋ ಟೆಸ್ಟ್ ನಲ್ಲಿ ಅಂಬಾಟಿ ರಾಯ್ಡು ವಿಫಲರಾಗಿ ಆಂಗ್ಲರ ವಿರುದ್ಧದ ಸರಣಿಗೆ ಆಯ್ಕೆಯಾಗಿರಲಿಲ್ಲ. ಇನ್ನು ಐಪಿಎಲ್ ಲೀಗ್ ವೇಳೆ ಗಾಯಗೊಂಡಿದ್ದ ಕೇದಾರ್ ಜಾಧವ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಇವರೊಂದಿಗೆ ರಾಜಸ್ತಾನ ಬೌಲರ್ ಖಲೀಲ್ ಅಹ್ಮದ್ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್ ತಂಡದಲ್ಲಿ ಆಡುವ ಏಕೈಕ ಕನ್ನಡಿಗರಾಗಿದ್ದಾರೆ.
ಏಷ್ಯಕಪ್ಗೆ ಟೀಂ ಇಂಡಿಯಾ ಪ್ರಕಟ
ಏಷ್ಯ ಕಪ್ ಟೂರ್ನಿಗೆ ಟೀಂಇಂಡಿಯಾ ಪ್ರಕಟ
ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ
ತಂಡವನ್ನ ಮುನ್ನಡೆಸಲಿದ್ದಾರೆ ಹಿಟ್ಮ್ಯಾನ್ ರೋಹಿತ್ ಶರ್ಮಾ
ತಂಡಕ್ಕೆ ಮರಳಿದ ಅಂಬಾಟಿ, ಕೇದಾರ್ ಜಾಧವ್
ತಂಡಕ್ಕೆ ಆಯ್ಕೆಯಾದ ರಾಜಸ್ತಾನ ಬೌಲರ್ ಖಲೀಲ್ ಅಹ್ಮದ್
ಟೀಂಇಂಡಿಯಾ
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್ (ಉಪನಾಯಕ), ಮಹೇಂದ್ರ ಸಿಂಗ್ ಧೋನಿ ,ಕೆ.ಎಲ್.ರಾಹುಲ್, ಅಂಬಾಟಿ ರಾಯುಡು, ಮನೀಶ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಯಜ್ವಿಂದರ್ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್.