ಸೆ.6 ರಂದು ದಲಿತ ಹೋರಾಟಗಾರರ ಸಮಾಲೋಚನಾ ಸಮಾವೇಶ

ಬೆಂಗಳೂರು, ಸೆ.1-ದಕ್ಷಿಣ ಭಾರತದ ದಲಿತ ಹೋರಾಟಗಾರರ ಸಮಾಲೋಚನಾ ಸಮಾವೇಶವನ್ನು ಸೆ.6 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಸೆನೆಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಹೋರಾಟಗಾರರ ಸಂಘದ ಅಧ್ಯಕ್ಷ ಎನ್.ವೆಂಕಟೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೌರ್ಜನ್ಯಗಳ ವಿರುದ್ಧ ದಲಿತರು ಸಂಘಟಿತರಾಗುವ ಅನಿವಾರ್ಯವಿದೆ. ಈ ನಿಟ್ಟಿನಲ್ಲಿ ಸಮಾವೇಶ ಕೈಗೊಳ್ಳಲಾಗುತ್ತಿದೆ ಎಂದರು.

ಇಂದು ಈ ದೇಶ ಕೊಲೆ ಸಂಸ್ಕøತಿಯಿಂದಲೇ ವಿಜೃಂಭಿಸುತ್ತಿದೆ. ದಿನನಿತ್ಯ ದಲಿತರ ಮೇಲೆ ಹಲ್ಲೆ ದೌರ್ಜನ್ಯ ಶೋಷಣೆಗಳು ಹೆಚ್ಚಾಗುತ್ತಲೇ ಇವೆ. ಇದರ ವಿರುದ್ಧ ಪ್ರಶ್ನಿಸುವವರನ್ನು, ಪ್ರಗತಿಪರರನ್ನು ಜೈಲಿಗೆ ಹಾಕುತ್ತಿದ್ದಾರೆ. ಕೊಲೆ ಮಾಡುತ್ತಿದ್ದಾರೆ. ಈ ಸಮಾಜದಲ್ಲಿ ದಲಿತರಿಗೆ ಸಂಪೂರ್ಣ ರಕ್ಷಣೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಮಾವೇಶದಲ್ಲಿ 15 ರಾಜ್ಯಗಳ ದಲಿತ ಹೋರಾಟಗಾರರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗುಜರಾತ್ ಶಾಸಕ ಹಾಗೂ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಉದ್ಘಾಟಿಸಲಿದ್ದಾರೆ. ತೆಲಂಗಾಣದ ಪೆÇ್ರ.ಗಾಲಿ ವಿನೋದ್‍ಕುಮಾರ್, ತಮಿಳುನಾಡಿನ ಬಾಲ ಸಿಂಗಂ, ಆಂಧ್ರದ ಶಿವಪ್ರಸಾದ್ ಸುಬ್ಬರಾವ್, ಒರಿಸ್ಸಾದ ಲಿಂಗರಾಜು, ವಿನೋದ್‍ಕುಮಾರ್, ಇಂದೂಧರ ಹೊನ್ನಾಪುರ ಎಂ.ಮುನಿಸ್ವಾಮಿ, ಮಾವಳ್ಳಿ ಶಂಕರ್ ಇತರರು ಭಾಗವಹಿಸಲಿದ್ದಾರೆ.
ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ರಕ್ಷಿಸಬೇಕು ಮತ್ತು ಬಲಪಡಿಸಬೇಕು. ಅದನ್ನು ಮಾರ್ಪಾಡಿಸಲಾಗದಂತೆ ಸಂವಿಧಾನದ ಒಂಭತ್ತನೇ ಷೆಡ್ಯೂಲ್‍ಗೆ ಸೇರಿಸಬೇಕು.

ದಲಿತ ಹೋರಾಟಗಾರರ ಮೇಲೆ ಹಾಕಲಾಗಿರುವ ಸುಳ್ಳು ಕೇಸುಗಳನ್ನು ಹಿಂಪಡೆಯಬೇಕು, ದಲಿತ ನೌಕರರಿಗೆ ನೀಡುತ್ತಿದ್ದ ಬಡ್ತಿಮೀಸಲಾತಿಯನ್ನು ಯಾವುದೇ ಅಡೆತಡೆ ಇಲ್ಲದಂತೆ ಜಾರಿಗೊಳಿಸಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸಬೇಕೆಂಬುದೂ ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಗೌರಿ ಎನ್.ವೆಂಕಟೇಶ್,ವಿ.ನಾಗರಾಜ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ