ಬೆಂಗಳೂರು,ಸೆ.1-ಸಾಹಿತ್ಯ ಪರಂಪರೆಯಲ್ಲಿ ಮೊಟ್ಟ ಮೊದಲಿಗೆ ಕಾವ್ಯಗಳು ರಚಿತವಾಗಿದ್ದು ಪ್ರಾಕೃತ ಭಾಷೆಯಲ್ಲಿ ಎಂದು ನಾಡೋಜ ಪೆÇ್ರ.ಹಂಪಾ ನಾಗರಾಜಯ್ಯ ತಿಳಿಸಿದರು.
ನಗರದ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಾಕೃತ ಪ್ರಭಾವಳಿ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ಕಾವ್ಯಗಳ ಪರಂಪರೆ ಆರಂಭವಾದ ನಂತರ ಪ್ರಾಕೃತ ಹಾಗೂ ಸಂಸ್ಕøತ ಭಾಷೆಯ ಪ್ರಭಾವ ಉಂಟಾಗಿತ್ತು. ಈ ಎರಡೂ ಭಾಷೆಗಳ ಜೊತೆ ಜೊತೆಗೆ ಕನ್ನಡ ಭಾಷೆಯ ಕವಿ ಪರಂಪರೆಯು ಬಲವಾಗಿ ಬೆಳೆಯಿತು ಎಂದು ಅಭಿಪ್ರಾಯಪಟ್ಟರು.
ಇಂದು ಕನ್ನಡ ಭಾಷೆ ಪ್ರಾಕೃತದ ಸಹಯೋಗದೊಂದಿಗೆ ದೊಡ್ಡದಾಗಿ ಬೆಳೆಯಲು ಸಹಾಯವಾಗಿದೆ ಎಂದರು.
ಸಾಹಿತ್ಯವನ್ನು ಪ್ರೀತಿಸುವ ಮನಸ್ಸುಗಳಿಗೆ ಇಂತಹ ವಿಶೇಷ ಕಾರ್ಯಕ್ರಮಗಳು ಹೆಚ್ಚಿನ ಲಾಭ ನೀಡುತ್ತವೆ. ಪ್ರಾಕೃತ ಕಾವ್ಯದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಜನರಿಗೆ ಸಾಕಷ್ಟಿದೆ. ಅಂಥವರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಹೇಳಿದರು.
ಸಾಹಿತ್ಯ ಜಗತ್ತಿನ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಳ್ಳವುದಕ್ಕೆ ಇದೊಂದು ಒಳ್ಳೆಯ ಭೂಮಿಕೆಯಾಗಿದೆ ಎಂದರು.
ಇಂತಹ ವಿಷಯವನ್ನೇ ಆರಿಸಿಕೊಂಡು ಅಮೆರಿಕದ ಹಾವರ್ಡ್ ವಿಶ್ವವಿದ್ಯಾನಿಲಯದ ಡಾ.ಆಂಡ್ರ್ಯೋ ಓಲೆಟ್ ಅಧ್ಯಯನ ನಡೆಸಿದ್ದಾರೆ. ಪ್ರಾಕೃತ ಭಾಷೆಯ ವ್ಯಾಪ್ತಿ, ಮಹತ್ವ, ಅನನ್ಯತೆ, ಇತಿಹಾಸ, ಪರಂಪರೆ ಇವುಗಳ ಚೌಕಟ್ಟಿನಲ್ಲಿ ಒಂದು ದೊಡ್ಡ ಮಹತ್ವದ ಕಾವ್ಯವನ್ನೇ ರಚಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಆಂಡ್ರ್ಯೋ ಓಲೆಟ್ , ಸಂಸ್ಕøತ ವಿವಿಯ ಕುಲಪತಿ ಪೆÇ್ರ.ಪದ್ಮಾ ಶೇಖರ್, ಹಿರಿಯ ಸಾಹಿತಿ ಕಮಲ ಹಂಪನಾ ಪಾಲ್ಗೊಂಡಿದ್ದರು.