ಬೆಂಗಳೂರು, ಸೆ.1- ಬಿಬಿಎಂಪಿ ವ್ಯಾಪ್ತಿಯ ಬೀದಿದೀಪಗಳಿಗೆ ಎಲ್ಇಡಿ ಬಲ್ಬ್ ಅಳವಡಿಸುವ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ವಕೀಲ ನಟರಾಜ್ ಶರ್ಮ ಎಸ್. ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರಲ್ಲಿ ಬಿಬಿಎಂಪಿ ನಗರದ ಬೀದಿ ದೀಪಗಳಲ್ಲಿ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲು ತೀರ್ಮಾನಿಸಿತು. ಇಂಟರ್ ನ್ಯಾಷನಲ್ ಫೈನಾನ್ಸ್ ಕಾಪೆರ್Çೀರೇಷನ್ ಎಂಬ ಸಂಸ್ಥೆ ಯನ್ನು ಸಲಹಾ ಸಮಿತಿ ಎಂದು ನೇಮಿಸಲಾಗಿತ್ತು. ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಈ ಸಂಸ್ಥೆಯನ್ನು ನೇಮಿಸಲಾಗಿದೆ ಎಂದು ಅವರು ಆರೋಪಿಸಿದರು.
ಈ ಸಂಸ್ಥೆ ಯೋಜನೆಯ ಟೆಂಡರ್ ಅನ್ನು ತಮಗೆ ಬೇಕಾದವರಿಗೆ ಕೊಡುವ ಉದ್ದೇಶದಿಂದ ಅರ್ಹತಾ ನಿಯಮಗಳನ್ನು ತನಗಿಷ್ಟ ಬಂದಂತೆ ರೂಪಿಸಿದೆ. ಆದ್ಯತೆಯ ಬಿಡ್ಡರ್ ಆಗಿ ಶಾಪೆÇೀರ್ಜಿ ಆಂಡ್ ಪಾಲೋಂಜಿ ಎಂಬ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲು ಫೈನಾನ್ಸ್ ಕಾಪೆರ್Çೀರೇಷನ್ ಸಹಾಯ ಮಾಡಿದೆ. ಇದರ ಹಿಂದೆ ದುರುದ್ದೇಶವಿದೆ ಎಂದು ಅವರು ದೂರಿದರು.
ಈ ದುರುದ್ದೇಶವನ್ನು ಡಿ.ವಿ.ಚಕ್ರವರ್ತಿ ಎಂಬವರು ಬಿಬಿಎಂಪಿ ಆಯುಕ್ತರ ಗಮನಕ್ಕೆ ತಂದು ಕ್ರಮಕೈಗೊಳ್ಳಲು ಒತ್ತಾಯಿಸಿದ್ದರು. ಆದರೆ ಆಯುಕ್ತರು ಈ ಬಗ್ಗೆ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಶರ್ಮಾ ಆರೋಪಿಸಿದರು.
ಈ ಯೋಜನೆಯಲ್ಲಿ ಸುಮಾರು 150 ಕೋಟಿಗೂ ಅಧಿಕ ಅವ್ಯವಹಾರವಾಗಿರುವುದು ಕಂಡುಬಂದಿದ್ದು, ಮುಂದಿನ 10 ವರ್ಷಗಳಲ್ಲಿ ಇದರ ನಿರ್ವಹಣೆ 2ಸಾವಿರ ಕೋಟಿಗೂ ಮೀರಲಿದೆ. ಇದರಲ್ಲಿ ಆಯುಕ್ತರು ಮತ್ತು ಯೋಜನಾ ಆಯುಕ್ತರು ಸಲಹಾ ಸಂಸ್ಥೆಗಳ ಕೈವಾಡವಿದ್ದು, ಎಲ್ಲಾ ದಾಖಲೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಅಳವಡಿಸಿಕೊಂಡಿರುವುದು ಕಂಡು ಬಂದಿದೆ.
ಶೇ.7.5ರಷ್ಟು ಪ್ರತಿವರ್ಷ ಯೋಜನಾ ಮೊತ್ತ ಲಂಚ ಪಡೆದಿದ್ದಾರೆ ಎಂದು ಚಕ್ರವರ್ತಿಯವರಿಗೆ ತಿಳಿದುಬಂದಿದ್ದು, ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದರಿಂದ ಬಿಬಿಎಂಪಿ ತರಾತುರಿಯಲ್ಲಿ ಕಾರ್ಯಗತಗೊಳಿಸಲು ಹೊರಟಿದೆ ಎಂದು ಅವರು ಆರೋಪಿಸಿದರು.