ರಾಂಚಿ, ಆ.31 (ಪಿಟಿಐ)- ಮಧ್ಯಾಹ್ನದ ಬಿಸಿಯೂಟ ಸೇವಿಸಿ ಬಾಲಕನೊಬ್ಬ ಮೃತಪಟ್ಟು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಜಾರ್ಖಂಡ್ನ ಕೊಡೆರ್ಮಾ ಜಿಲ್ಲೆಯ ಶಾಲೆಯೊಂದರಲ್ಲಿ ಸಂಭವಿಸಿದೆ.
ಈ ಘಟನೆ ಬಗ್ಗೆ ಕೊಡೆರ್ಮಾ ಜಿಲ್ಲಾಧಿಕಾರಿ ಭುವನೇಶ್ ಪ್ರತಾಪ್ ಸಿಂಗ್ ತನಿಖೆಗೆ ಆದೇಶಿಸಿದ್ದಾರೆ.
ನಿನ್ನೆ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾದರು. ಇವರಲ್ಲಿ ಓರ್ವ ವಿದ್ಯಾರ್ಥಿ ಕಲುಷಿತ ಆಹಾರದಿಂದ ಮೃತಪಟ್ಟಿದ್ದಾನೆ. ಮಧ್ಯಮ ಶಾಲೆಯ ವಿದ್ಯಾರ್ಥಿಗಳು ಅನ್ನ, ಪನೀರ್ ಮತ್ತು ಆಲೂಗಡ್ಡೆ ಗೊಜ್ಜು ಸೇವಿಸಿದ್ದರು. ನಂತರ ಅವರು ವಾಂತಿ, ಬೇಧಿ ಮತ್ತು ಹೊಟ್ಟೆ ನೋವಿನಿಂದ ನರಳಿದರು. ಅವರನ್ನೆಲ್ಲಾ ಸ್ಥಳೀಯ ಸರ್ದಾರ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ಅಸ್ವಸ್ಥರಾದ ಇತರ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚೇತರಿಸಿಕೊಂಡು ಶಾಲೆಗೆ ಹಿಂದಿರುಗಿದ್ದಾರೆ.