ಸರಣಿ ಬ್ಯಾಂಕ್ ರಜೆ ಕುರಿತ ವಾಟ್ಸಪ್ ವೈರಲ್ ಸಂದೇಶ ಸುಳ್ಳು: ಬ್ಯಾಂಕ್ ಅಧಿಕಾರಿಗಳ ಸ್ಪಷ್ಟನೆ

ಬೆಂಗಳೂರು: ಸರಣಿ ಬ್ಯಾಂಕ್ ರಜೆ ಕುರಿತ ವಾಟ್ಸ್ ಆಪ್ ಸಂದೇಶಗಳು ವೈರಲ್ ಆಗುತ್ತಿದ್ದು, ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸೆ.02-09 ರ ವರೆಗೆ ಬ್ಯಾಂಕ್ ರಜೆ ಇದ್ದು ಎಟಿಎಂ ಗಳಲ್ಲಿ ಹಣ ಇರುವುದಿಲ್ಲ ಎಂದು ವಾಟ್ಸ್ ಆಪ್ ಸಂದೇಶ ವೈರಲ್ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಬ್ಯಾಂಕ್ ಅಧಿಕಾರಿಗಳು, ’ಪಿಂಚಣಿ ವಿಷಯಕ್ಕೆ ಸಂಬಂಧಿಸಿದಂತೆ ನೌಕರರು ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಸೆ.4-5 ರಂದು ಆರ್ ಬಿಐ ಬಂದ್ ಆಗಿರಲಿದೆ. ಉಳಿದ ಬ್ಯಾಂಕ್ ಗಳು ಸೆ.02 (ಭಾನುವಾರ) ಹಾಗೂ ಸೆ.3 ರಂದು ಜನ್ಮಾಷ್ಟಮಿಯಂದು ಹಾಗೂ ಸೆ.08-09 (ಶನಿವಾರ, ಭಾನುವಾರ) ಗಳಂದು ಬಂದ್ ಆಗಿರಲಿವೆ ಎಂದು ಹೇಳಿದ್ದಾರೆ.

ನೌಕರರ ಪ್ರತಿಭಟನೆಯಿಂದಾಗಿ ಎಟಿಎಂ ಗಳಿಗಾಗಲೀ ಆನ್ ಲೈನ್ ಟ್ರಾನ್ಸ್ಫರ್ ಗಾಗಲೀ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಥಾಮಸ್ ಫ್ರಾಂಕೊ ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ