ಬೆಂಗಳೂರು, ಆ.31-ಕರ್ನಾಟಕದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಖ್ಯಾತ ಮೂಳೆ ತಜ್ಞಡಾ| ಪ್ರಶಾಂತ್ಆರ್. ಅವರುರೋಬೊಟಿಕ್ಸ್ ಅಸಿಸ್ಟೆಡ್ (ರೋಬೊಟ್ ನೆರವಿನ) ಸಂಪೂರ್ಣ ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಿ ದಾಖಲೆ ನಿರ್ಮಿಸಿದ್ದಾರೆ.
ಅಮೆರಿಕದ ಖ್ಯಾತ ಅಸ್ಥಿ ಶಸ್ತ್ರಚಿಕಿತ್ಸಕ ಡಾ.ಬಟ್ರ್ರಾಂಡ್ ಪಿ. ಕೇಪರ್ ಅವರ ಜೊತೆಗೂಡಿ ಒಂದರ ಬೆನ್ನ ಹಿಂದೆ ಒಂದರಂತೆ 2 ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ತುಮಕೂರಿನ 65 ವರ್ಷದ ಗೃಹಿಣಿ ಪದ್ಮಾವತಿ ಸಂಕವಲ್ಲ ಹಾಗೂ ಬೆಂಗಳೂರಿನ ಉದ್ಯಮಿ ಆಶಾಲತಾ ಮಂಜುನಾಥ್ ಅವರು ಇದರ ಪ್ರಯೋಜನ ಪಡೆದಿದ್ದಾರೆ. ಇವರಿಬ್ಬರೂ ಬಹಳ ವರ್ಷಗಳಿಂದ ತೀವ್ರತರ ಮಂಡಿನೋವುಅನುಭವಿಸುತ್ತಿದ್ದರು. ಇವರಿಗೆ ಇದೀಗ ಅಮೆರಿಕದಲ್ಲಿ ಅಭಿವೃದ್ಧಿ ಪಡಿಸಿದ ಅತ್ಯಾಧುನಿಕ ನೇವಿಯೋ ಪಿಎಫ್ಎಸ್ ರೋಬೊಟಿಕ್ಸ್ ಸರ್ಜಿಕಲ್ ಸಿಸ್ಟಂ ಬಳಸಿ ಸಂಪೂರ್ಣ ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಇದು ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಯಲ್ಲೇಅತ್ಯಂತ ಸುಧಾರಿತ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಕರ್ನಾಟಕದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಯನ್ನು ಬೆಂಗಳೂರಿನ ಸ್ಪೆಷಾಲಿಟಿ ಆಸ್ಪತ್ರೆ ತನ್ನದಾಗಿಸಿಕೊಂಡಿದೆ.
ಇದೇ ವೇಳೆ ಮಾತನಾಡಿದ ಅಮೆರಿಕದ ಡಾ.ಬಟ್ರ್ರಾಂಡ್ ಪಿ. ಕೇಪರ್, ಭಾರತಕ್ಕೆ ಬರಲು, ಅದರಲ್ಲೂ ಬೆಂಗಳೂರಿನ ಸ್ಪೆಷಾಲಿಟಿ ಆಸ್ಪತ್ರೆಗೆ ಬಂದು ಈ ಶಸ್ತ್ರಚಿಕಿತ್ಸೆ ನಡೆಸಲು ನನಗೆ ಬಹಳ ಖುಷಿಯಾಗುತ್ತಿದೆ. ಡಾ.ಪ್ರಶಾಂತ್ಅವರು ಹೊಸ ಹೊಸ ವೈದ್ಯಕೀಯ ತಂತ್ರಜ್ಞಾನಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುವುದರಲ್ಲಿ ಅತ್ಯಂತ ಆಸಕ್ತಿ ಹೊಂದಿರುವ ವೈದ್ಯರಾಗಿ ನನಗೆ ಚಿರಪರಿಚಿತರು ಎಂದರು.
ಸಾಂಪ್ರದಾಯಿಕ ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ರೋಬೊಟ್ ನೆರವಿನ ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಯಿಂದ ಸಾಕಷ್ಟು ಅನುಕೂಲಗಳಿವೆ. ಇದು ಮೂಳೆಯನ್ನು ರಕ್ಷಿಸುವ ತಂತ್ರಜ್ಞಾನವಾಗಿದ್ದು, ದೇಹದ ಸಹಜ ಅಂಗರಚನೆಯನ್ನು ಹಾಗೇ ಉಳಿಸಿಕೊಳ್ಳಲು ನೆರವಾಗುತ್ತದೆ. ಇನ್ನು, ಈ ವಿಧಾನದಲ್ಲಿ ವೈದ್ಯರುಅತ್ಯಂತ ಕರಾರುವಾಕ್ಕಾಗಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯ. ಎಷ್ಟೇ ಸಂಕೀರ್ಣ ಪ್ರಕರಣವಾಗಿದ್ದರೂ ಮತ್ತು ಶಸ್ತ್ರಚಿಕಿತ್ಸೆ ನಡೆಸುವುದು ಎಷ್ಟೇ ಕಠಿಣವಾಗಿದ್ದರೂ ಈ ವಿಧಾನದಲ್ಲಿ ವೈದ್ಯರು ಅತ್ಯಂತ ಆತ್ಮವಿಶ್ವಾಸದಿಂದ ಶಸ್ತ್ರಚಿಕಿತ್ಸೆ ನಡೆಸಬಹುದು.
ಇದು ನಮ್ಮ ಆಸ್ಪತ್ರೆಯಲ್ಲಿರುವ ಅತ್ಯಂತ ಉನ್ನತ ಮಟ್ಟದ ದುಬಾರಿ ತಂತ್ರಜ್ಞಾನವಾಗಿದ್ದರೂ ಹೆಚ್ಚೆಚ್ಚು ರೋಗಿಗಳಿಗೆ ಇದರ ಪ್ರಯೋಜನ ಸಿಗಬೇಕು ಎಂಬ ಉದ್ದೇಶದಿಂದ ನಾವು ಈ ವಿಧಾನದಲ್ಲಿ ಮಾಡುವ ಶಸ್ತ್ರಚಿಕಿತ್ಸೆಯನ್ನು ದುಬಾರಿಯಾಗಿರಿಸಿಲ್ಲ ಎನ್ನುತ್ತಾರೆ ಡಾ.ಪ್ರಶಾಂತ್ ಆರ್.
ಈಗ ಜಗತ್ತಿನಲ್ಲೇ ಅಮೆರಿಕವನ್ನು ಹೊರತುಪಡಿಸಿದರೆ ರೋಬೊಟ್ ಬಳಸಿ ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸುವ ಎರಡನೇ ದೇಶ ಎಂಬ ಖ್ಯಾತಿ ನಮ್ಮದು!