ಶ್ರೀನಗರ (ಪಿಟಿಐ), ಆ.31-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆ ತೀವ್ರಗೊಂಡಿರುವಾಗಲೇ ಮತ್ತೊಂದೆಡೆ ಉಗ್ರರ ಅಟ್ಟಹಾಸವೂ ಮುಂದುವರಿದೆ. ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಉಗ್ರರು ಡಿಎಸ್ಪಿ ಸೇರಿದಂತೆ ಪೆÇಲೀಸರು ಮತ್ತು ಯೋಧರ ಕುಟುಂಬಗಳಿಗೆ ಸೇರಿದ ಒಂಭತ್ತು ಮಂದಿಯನ್ನು ಅಪಹರಿಸಿದ್ದಾರೆ.
ಕಳೆದ ಒಂದು ವಾರದಿಂದ ಭದ್ರತಾ ಪಡೆಗಳು ಉಗ್ರರ ದಮನ ಕಾರ್ಯಾಚರಣೆ ತೀವ್ರಗೊಳಿಸಿ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರರೂ ಸೇರಿದಂತೆ ಕೆಲವು ಆತಂಕವಾದಿಗಳನ್ನು ಹೊಡೆದುರುಳಿಸಿದ ಬೆನ್ನಲ್ಲೇ ಉಗ್ರರು ಪೆÇಲೀಸ್ ಮತ್ತು ಯೋಧರ ಕುಟುಂಬಗಳನ್ನು ಅಪಹರಿಸಿದ್ದು, ಇದು ಪ್ರತೀಕಾರದ ಕೃತ್ಯ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಪಹೃತರ ಸುರಕ್ಷಿತ ಬಿಡುಗಡೆಗೆ ಪೆÇಲೀಸರು ಮತ್ತು ಯೋಧರು ಕಾರ್ಯೋನ್ಮುಖರಾಗಿದ್ದಾರೆ.
ಗುರುವಾರ ರಾತ್ರಿ ಭಯೋತ್ಪಾದಕರು ಶೋಪಿಯಾನ್, ಕುಲ್ಗಂ, ಅನಂತನಾಗ್ ಮತ್ತು ಅವಂತಿಪೆÇರಾ ಜಿಲ್ಲೆಗಳಲ್ಲಿ ಜಮ್ಮು ಮತ್ತು ಪೆÇಲೀಸ್ ಮತ್ತು ಯೋಧರ ಕುಟುಂಬಗಳಿಗೆ ಸೇರಿದ ಒಂಭತ್ತು ಜನರನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಎಳೆದೊಯ್ದಿದ್ದಾರೆ.
ಅಪಹೃತರಲ್ಲಿ ಉಪ ಪೆÇಲೀಸ್ ವರಿಷ್ಠಾಧಿಕಾರಿ ಸಹೋದರ ಕೂಡ ಸೇರಿದ್ದಾರೆ. ಈ ಬಗ್ಗೆ ಪೆÇಲೀಸರು ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲವಾದರೂ, ಉಗ್ರರ ಬಿಗಿ ಹಿಡಿತದಿಂದ ಅಪಹೃತರನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ.
ಗೌಹೆರ್ ಅಹಮದ್ ಮಲಿಕ್(ಡಿಎಸ್ಪಿ ಐಜಾಜ್ ಸಹೋದರ), ಜುಬೇರ್ ಅಹಮದ್ ಭಟ್(ಪೆÇಲೀಸ್ ಪೇದೆ ಮಹಮದ್ ಮಕ್ಬುಲ್ ಭಟ್ ಪುತ್ರ), ಆರೀಫ್ ಅಹಮದ್ ಸಂಕರ್(ಠಾಣಾಧಿಕಾರಿ ನಾಸಿರ್ ಅಹಮದ್ ಸಂಕರ್ ಸಹೋದರ), ಫೈಜಾನ್ ಅಹಮದ್ ಮಕ್ರೋ(ಪೆÇಲೀಸ್ ಕಾನ್ಸ್ಟೆಬಲ್ ಬಷೀರ್ ಅಹಮದ್ ಮಕ್ರೋ ಪುತ್ರ), ಸುಮರ್ ಅಹಮದ್ ರಾಥೆರ್(ಪೆÇಲೀಸ್ ಪೇದೆ ಅಬ್ದುಲ್ ಸಲಾಂ ರಾಥೆರ್ ಪುತ್ರ) ಹಾಗೂ ಯಾಶಿರ್ ಅಹಮದ್ ಭಟ್(ಎಎಸ್ಐ ಬಷೀರ್ ಅಹಮದ್ ಭಟ್ ಪುತ್ರ) ಅವರನ್ನು ಉಗ್ರರು ಅಪಹರಿಸಿದ್ದಾರೆ.
ಅಲ್ಲದೇ, ನಿನ್ನೆ ಸಂಜೆ ನಾಸಿರ್ ಅಹಮದ್ ಹಾಗೂ ಶಬೀರ್ ಅಹಮದ್ ಜರ್ಗಾರ್ ಅವರನ್ನೂ ಸಹ ಅಪಹರಿಸಲಾಗಿದೆ. ಪೆÇಲೀಸ್ ಕಾನ್ಸ್ಟೆಬಲ್ ರಫೀಕ್ ಅಹಮದ್ ರಾಥೆರ್ ಅವರ ಪುತ್ರ ಆಸಿಫ್ ಅಹಮದ್ ರಾಥೆರ್ ಅವರನ್ನು ಸಹ ಉಗ್ರರು ಕಿಡ್ನಾಪ್ ಮಾಡಿರುವ ವರದಿಗಳಿವೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಾಲ್ವರು ಪೆÇಲೀಸರನ್ನು ಉಗ್ರರು ಕೊಂದು ಹಾಕಿದ ನಂತರ ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿ ಭಯೋತ್ಪಾದಕರ ಮನೆಗಳನ್ನು ಧ್ವಂಸಗೊಳಿಸಿ ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದರು.
ಇದಾದ ನಂತರ ಉಗ್ರರು ಮಧ್ಯ ಕಾಶ್ಮೀರದ ಗಂದೇರ್ಬಲ್ ಜಿಲ್ಲೆಯಲ್ಲಿ ಪೆÇಲೀಸ್ ಸಿಬ್ಬಂದಿಯ ಸಂಬಂಧಿಯೊಬ್ಬರನ್ನು ಅಪಹರಿಸಿ ಥಳಿಸಿ ಚಿತ್ರಹಿಂಸೆ ನೀಡಿ ಬಿಡುಗಡೆಗೊಳಿಸಿದ್ದರು.
ಈಗ ಉಗ್ರರಿಂದ ಅಪಹರಿಸಲ್ಪಟ್ಟಿರುವ ಭದ್ರತಾ ಸಿಬ್ಬಂದಿ ಕುಟುಂಬದ ಒಂಭತ್ತು ಜನರ ಸುರಕ್ಷಿತ ಬಿಡುಗಡೆಗಾಗಿ ಪೆÇಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.