ಬೆಂಗಳೂರು, ಆ.31-ಭಾರತೀಯ ಅಂಚೆ ಕಚೇರಿಗಳಲ್ಲಿ ಇಂಡಿಯಾ ಪೆÇೀಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಆರಂಭಿಸಲು ಮುಂದಾಗಿದ್ದು, ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಈ ಸೇವೆಗೆ ಚಾಲನೆ ನೀಡಲಿದ್ದಾರೆ.
ನಗರದ ಮ್ಯೂಸಿಯಂ ರೋಡ್ ಶಾಖೆಯಲ್ಲಿ ಇದರ ಉದ್ಘಾಟನಾ ಸಮಾರಂಭವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ಕುಮಾರ್ ನೆರವೇರಿಸಲಿದ್ದು,
ಸಂಸದ ಪಿ.ಸಿ.ಮೋಹನ್, ಶಾಸಕರ ಎನ್.ಎ.ಹ್ಯಾರೀಸ್, ಆರ್ಬಿಐನ ಮುಖ್ಯವ್ಯವಸ್ಥಾಪಕ ಸತ್ವಂತ್ಸಿಂಗ್ ಸಹೋಟ ಪಾಲ್ಗೊಳ್ಳಲಿದ್ದಾರೆ.
ಅಂಚೆ ಕಚೇರಿ ಮೂಲಕ ಪೇಮೆಂಟ್ ಬ್ಯಾಂಕ್ ವ್ಯವಹಾರದಿಂದ ಸಾಕಷ್ಟು ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ದೇಶಾದ್ಯಂತ 1.55 ಲಕ್ಷ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
ನಾಳೆ ಪ್ರಧಾನಿ ನರೇಂದ್ರ ಮೋದಿಯವರು 656 ಶಾಖೆಗಳಲ್ಲಿ ಈ ಸೇವೆಗೆ ಚಾಲನೆ ದೊರೆಯಲಿದ್ದು, ಡಿಸೆಂಬರ್ ವೇಳೆಗೆ 9 ಸಾವಿರಕ್ಕೂ ಹೆಚ್ಚು ಅಂಚೆ ಕಚೇರಿಗಳಲ್ಲಿ ಸೇವೆ ಲಭ್ಯವಿದೆ.
ಖಾತೆ ಹೊಂದಿರುವವರಿಗೆ ವ್ಯವಹಾರ ನಡೆಸಲು ಎಟಿಎಂ ಕಾರ್ಡ್ ಮಾದರಿ ಕಾರ್ಡ್ ನೀಡಲಿದ್ದು, ಇದರಲ್ಲಿ ಕೋಡ್ ಸಿಸ್ಟಮ್ ಅಳವಡಿಸಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದಾಗ ನಿಮ್ಮ ಮೊಬೈಲ್ಗೆ ಬರುವ ಒಟಿಪಿ ಆಧರಿಸಿ ವ್ಯವಹಾರ ನಡೆಸಬಹುದಾಗಿದೆ.
ಆಧಾರ್ಕಾರ್ಡ್ನಂತೆ ಹೆಬ್ಬೆಟ್ಟಿನ ಗುರುತು ಆಧರಿಸಿ ನಡೆಸುವ ವ್ಯವಹಾರಗಳಿಂದ ಇದು ಸುರಕ್ಷಿತ ವ್ಯವಹಾರವಾಗಲಿದ್ದು, ಕಾರ್ಡ್ ಕಳೆದರೂ ಬೇರೆಯವರು ದುಡ್ಡು ಕದಿಯಲು ಸಾಧ್ಯವಿಲ್ಲ. ಹೀಗಾಗಿ ಇದೊಂದು ಸುರಕ್ಷಿತ ವಿಧಾನವಾಗಿದ್ದು, ಈಗಾಗಳೇ ಅಂಚೆ ಕಚೇರಿಯಲ್ಲಿ ಎಸ್ಬಿ ಖಾತೆ ಹೊಂದಿರುವ 26 ಲಕ್ಷ ಮಂದಿ ಸೇರಿದಂತೆ ಹೆಚ್ಚುವರಿಯಾಗಿ 14 ಲಕ್ಷ ಮಂದಿಗೆ ಖಾತೆ ಸೌಲಭ್ಯ ಒದಗಿಸಿ ಒಟ್ಟು ರಾಜ್ಯದಲ್ಲಿ 40ಲಕ್ಷ ಮಂದಿ ಈ ಸೇವೆಯ ಲಾಭ ಪಡೆಯಲಿದ್ದಾರೆ.
ನಿಮ್ಮ ಮನೆ ಬಾಗಿಲಿಗೆ ಬ್ಯಾಂಕ್ ಎಂಬ ಪರಿಕಲ್ಪನೆಯಡಿ ಆರಂಭಿಸಲಾಗಿರುವ ಈ ಬ್ಯಾಂಕಿಂಗ್ ವ್ಯವಸ್ಥೆಯಿಂದಾಗಿ ವಿವಿಧ ಮಾಸಾಶನಗಳ ಪಾವತಿಯನ್ನು ಅಂಚೆ ಕಚೇರಿ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಒದಗಿಸಲಿದ್ದಾರೆ. ನಿಮ್ಮ ಮೊಬೈಲ್ ಸಂಖ್ಯೆಗೆ ರವಾನೆಯಾಗುವ ಕೋಡ್ ಆಧರಿಸಿ ಹಣ ಪಾವತಿ ಮಾಡಲಾಗುತ್ತದೆ.
ಡಿಜಿಟಲ್ ನೆಟ್ ಬ್ಯಾಂಕಿಂಗ್ ಸೇವೆಗಳು ಇದಕ್ಕೆ ಅಳವಡಿಸಲಾಗಿದ್ದು, ಏರ್ಟಿಕೆಟ್, ಬುಕ್ ಮೈ ಶೋ, ಅಮೆಜಾನ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಚಿಂತನೆ ನಡೆದಿದೆ.
ಇದಲ್ಲದೆ, ಬಿಬಿಎಂಪಿಯ ಆಸ್ತಿತೆರಿಗೆ ಪಾವತಿ, ಬೆಸ್ಕಾಂಬಿಲ್ ಪಾವತಿಸುವುದೂ ಸೇರಿದಂತೆ ಇನ್ನಿತರ ಸೇವೆಗಳಿಗೆ ಇದನ್ನು ಬಳಸಿಕೊಳ್ಳಲು ಚಿಂತನೆ ನಡೆದಿದ್ದು, ಶೀಘ್ರದಲ್ಲೇ ಈ ಸೇವೆಗಳು ಪೆÇೀಸ್ಟ್ ಪೇಮೆಂಟ್ ಬ್ಯಾಂಕ್ನಡಿ ಬರಲಿವೆ.
ಗ್ರಾಮೀಣ ಭಾಗದ ಜನರಿಗೂ ಈ ಸೇವೆ ಒದಗಿಸಲು ಗ್ರಾಮೀಣ ಭಾಗದ ಶಾಖೆಗಳಲ್ಲೂ ಪೆÇೀಸ್ಟ್ ಪೇಮೆಂಟ್ ಸೇವೆ ಆರಂಭಿಸಲಾಗುತ್ತಿದೆ. ನಾಳೆ ಬೆಳಗ್ಗೆ ಮೋದಿಯವರು ಅಧಿಕೃತವಾಗಿ ಚಾಲನೆ ನೀಡಲಿರುವ ಸೇವೆಗೆ ರಾಜ್ಯದಲ್ಲೂ ನಾಳೆ ಮಧ್ಯಾಹ್ನ ನಡೆಯಲಿರುವ ಕಾರ್ಯಕ್ರಮದಲ್ಲಿ ಚಾಲನೆ ದೊರೆಯಲಿದೆ.