ಟಿ ಶರ್ಟ್ ಬಿಚ್ಚಿದಕ್ಕೆ ಆಟಗಾರ್ತಿಗೆ ಶಿಕ್ಷೆ ನೀಡಿ ಮುಜಗುರಕ್ಕೀಡಾದ ಯುಎಸ್ ಟೆನ್ನಿಸ್ ಅಸೋಸಿಯೇಷನ್

ನ್ಯಾಯಾರ್ಕ್ : ಟಿ ಶರ್ಟ್ ಉಲ್ಟಾ ಹಾಕಿದನ್ನ ಮನಗೊಂಡು ಆನ್​ಫೀಲ್ಡ್​ನಲ್ಲೆ ಸರಿಪಡಿಸಿಕೊಂಡ ಫ್ರೆಂಚ್ ಟೆನ್ನಿಸ್ ಆಟಗಾರ್ತಿ ಅಲೀಜ್ ಕಾರ್ನೆಟ್​ಗೆ ಯುಎಸ್​ಎ ಟೆನ್ನಿಸ್ ಅಸೋಸಿಯೇಷನ್ ಶಿಕ್ಷೆ ಕೊಟ್ಟು ಮುಜುಗರಕ್ಕೀಡಾದ ಘಟನೆ ನಡೆಸಿದೆ.
ಮೊನ್ನೆ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸ್ವೀಡನ್​ನ ಜೊಹನ್ನ ಲಾರಸನ್​ ವಿರುದ್ಧ ಆಡುವ ವೇಳೆ ಫ್ರೆಂಚ್ ಟೆನ್ನಿಸ್ ಆಟಗಾರ್ತಿ ಅಲೀಜ್ ಕಾರ್ನೆಟ್ ತಾವು ಧರಿಸಿದ್ದ ಟಿ ಶರ್ಟ್ ಸರಿಯಾಗಿ ಹಾಕಿ ಕೊಂಡಿಲ್ಲ ಅನ್ನೋದು ಅರಿವಾಯಿತು. ತಕ್ಷಣ ಅಂಗಳದಲ್ಲೆ ಕಾರ್ನೆಟ್ ಟಿ ಶರ್ಟ್ ನ್ನ ಬಿಚ್ಚಿ ಸರಿಪಡಿಸಿಕೊಂಡ್ರು. ಇದನ್ನು ಗಮನಿಸಿದ ಚೇರ್ ಅಂಪೈರ್ ಕ್ರಿಶ್ವಿಯನ್ ರಾಸ್ಕ್ ಕಾರ್ನೆಟ್ ನೀತಿ ನಿಯಮಗಳ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಶಿಕ್ಷೆ ನೀಡಿದ್ರು.
ಡಬ್ಲ್ಯುಟಿಎ ನಿಯಮ ಪ್ರಕಾರ ಅಂಗಳದಲ್ಲಿ ಮಹಿಳಾ ಆಟಗಾರ್ತಿಯರು ಬಟ್ಟೆ ಬದಲಿಸಲು ಅವಕಾಶವಿಲ್ಲ. ಯುಎಸ್​ ಓಪನ್ ಟೂರ್ನಿಯ ಅಧಿಕಾರಿಗಳು ಕಾರ್ನೆಟ್ ವಿರುದ್ಧ ಶಿಸ್ತುಕ್ರಮಕೈಗೊಂಡ್ರು.
ಕಾರ್ನೆಟ್ ವಿರುದ್ಧ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗಳು ಕೇಳಿ ಬಂದವು. ಕಾರ್ನೆಟ್ ಪರ ನಿಂತ ಟ್ವಿಟಿಗರು ಟಿ-ಶರ್ಟ್ ಬಿಚ್ಚಿದಕ್ಕೆ ಶಿಕ್ಷೆ ಕೊಡುವ ನೀವು ಟಾಪ್​ಲೆಸ್​ ಆಗಿ ಕೂರುವ ನವೊಕ್ ಜೆಕೊವಿಕ್ ಯಾಕೆ ಶಿಕ್ಷೆ ಕೊಡೋದಿಲ್ಲ ಅಂತ ಪ್ರಶ್ನಿಸಿದ್ದಾರೆ. ಟೀಕೆಗಳು ಕೇಳಿ ಬರುತ್ತಿದ್ದಂತೆ ಎಚ್ಚೆತ್ತ ಯುಎಸ್​ ಟೆನ್ನಿಸ್ ಅಸೋಸಿಯೇಷನ್ ಕಾರ್ನೆಟ್ ವಿರುದ್ಧ ಪ್ರಕಟಿಸಿದ್ದ ಶಿಕ್ಷೆಯನ್ನ ಹಿಂತೆಗೆದುಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ