ಇಂದು ಮತ್ತೆ ಸುಪ್ರೀಂ ಮುಂದೆ 35-ಎ ವಾದ-ಪ್ರತಿವಾದ: ಕೋರ್ಟ್​ನತ್ತ ಎಲ್ಲರ ಚಿತ್ತ

ನವದೆಹಲಿ: ಬಹು ವಿವಾದಿತ ಸಾಂವಿಧಾನಿಕ ವಿಧಿ 35-ಎ ವಾದ-ಪ್ರತಿವಾದವನ್ನು ಇಂದು ಸುಪ್ರೀಂಕೋರ್ಟ್​ನ ಮೂವರು ನ್ಯಾಯಮೂರ್ತಿಗಳ ಪೀಠ ಆಲಿಸಲಿದ್ದು, ಎಲ್ಲರ ಚಿತ್ತ ಸುಪ್ರೀಂನತ್ತ ನೆಟ್ಟಿದೆ.

ಸುಪ್ರೀಂನ ಮುಖ್ಯ ನಾಯಮೂರ್ತಿ ದೀಪಕ್​, ಈಗಾಗಲೇ 35-ಎ ವಿಧಿಯು ಭಾರತದ ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿಯೇ ಎಂಬುದರ ಬಗ್ಗೆ ಈ ಮುಂಚೆ ಪರಿಶೀಲಿಸಿದ್ದಾರೆ. ಮೂವರು ನ್ಯಾಯಮೂರ್ತಿಗಳ ಪೀಠ ಈ ಬಗ್ಗೆ ವಾದ-ವಿವಾದ ಆಲಿಸಲಿದೆ ಎಂದಿದ್ದಾರೆ.

ಸ್ಥಳೀಯ ಸಂಸ್ಥೆಗಳ ಕಾರಣವೊಡ್ಡಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ವಿಧಿ ಕುರಿತಾದ ವಿಚಾರಣೆಯನ್ನು ಮುಂದೂಡಬೇಕೆಂದು ಸುಪ್ರೀಂಗೆ ಮನವಿ ಸಲ್ಲಿಸಿತ್ತು. ವಿಧಿ ವಿರೋಧಿಸಿ ಅರ್ಜಿ ಸಲ್ಲಿಸಿದ್ದವರು ಇದನ್ನು ಖಂಡಿಸಿದ್ದರು. ಕಣಿವೆ ರಾಜ್ಯದ ನಿವಾಸಿಗಳಿಗೆ ವಿಶೇಷ ಪ್ರಾತಿನಿಧ್ಯ ನೀಡುವ ವಿಧಿಯನ್ನು ಮುಂದುವರೆಸುವಂತೆ ಹಲವಾರು ಅರ್ಜಿಗಳು ಸುಪ್ರೀಂಗೆ ಸಲ್ಲಿಕೆಯಾಗಿವೆ. ಈ ಬಗ್ಗೆ ಸುಪ್ರೀಂ ತನ್ನ ತೀರ್ಪು ಪ್ರಕಟಿಸಲಿದೆಯೇ ಅಥವಾ ಮತ್ತೆ ವಿಚಾರಣೆ ಮುಂದೂಡಲಿದೆಯೇ ಎಂದು ಜನರು ನಿರೀಕ್ಷಿಸುತ್ತಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ