ಬೆಂಗಳೂರು,ಆ.30- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಬೆಂಗಳೂರು ಪ್ರಾದೇಶಿಕ ಕೇಂದ್ರದಿಂದ 2018-19ನೇ ಶೈಕ್ಷಣಿಕ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‍ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿಮ ಬಿಎ, ಬಿಕಾಂ, ಬಿಎಲ್‍ಐಸಿ, ಎಂಎ, ಎಂಕಾಂ, ಎಂಎಲ್‍ಐಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ(ಎಂಸಿಜೆ) ಎಂಎಲ್‍ಐಸಿ ಎಂ.ಎಸ್ಸಿ(ಪರಿಸರ ವಿಜ್ಞಾನ) ಕೋರ್ಸ್‍ಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಯಾವುದೇ ದಂಡ ಶುಲ್ಕವಿಲ್ಲದೆ ಸೆ.29 ಕೊನೆಯ ದಿನ ಹಾಗೂ 200 ರೂ. ದಂಡ ಶುಲ್ಕದೊಂದಿಗೆ ಅಕ್ಟೋಬರ್ 1ರಂದು ಅಂತಿಮ ದಿನವಾಗಿರುತ್ತದೆ.
ಬಿಎ ಮತ್ತು ಬಿಕಾಂ ಕೋರ್ಸ್‍ಗಳಿಗೆ 4600 ರೂ. ಹಾಗೂ ಎಂಎ ಮತ್ತು ಎಂಕಾಂ ಕೋರ್ಸ್‍ಗಳಿಗೆ 6100 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ವಿಶೇಷವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಮಾತ್ರ ಶೇ.25ರಷ್ಟು ವಿನಾಯಿತಿ ನೀಡಲಾಗುವುದು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಪ್ರವೇಶ ಶುಲ್ಕದಲ್ಲಿ ವಿನಾಯಿತಿ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‍ಸೈಟ್ ಡಿಡಿಡಿ.hoಟ್ಠಞqsoಟ್ಟಛಿ.hZ್ಟ್ಞZಠಿZhZ.ಜಟq.ಜ್ಞಿಹಾಗೂ ದೂ: 080-266603664, 9448668880 ಸಂಪರ್ಕಿಸಬಹುದು ಎಂದು ಕರಾಮುವಿಯ ಪ್ರಾದೇಶಿಕ ನಿರ್ದೇಶಕರಾದ ಗಿರೀಶ್, ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
100 ದಿನ ಪೂರೈಸಿದ ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿಯಿಂದ ಟ್ವೀಟ್ ವ್ಯಂಗ್ಯ
ಬೆಂಗಳೂರು,ಆ.30- ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ.
ದಿನಗಳು ನೂರು,
ಹೋದಲೆಲ್ಲ ಕಣ್ಣೀರು,
ಅಭಿವೃದ್ಧಿಗೆ ಎಳ್ಳುನೀರು!
ಎಂದು ವ್ಯಂಗ್ಯವಾಡಿದೆ.
ಮಾನ್ಯ ಕುಮಾರಸ್ವಾಮಿಯವರೇ,
ಅಪವಿತ್ರ ಮೈತ್ರಿಯಲ್ಲಿನ ತೀವ್ರ ಭಿನ್ನಮತದ ನಡುವೆಯೂ ನಿಮ್ಮ ಸರ್ಕಾರ 100 ದಿನಗಳನ್ನು ಪೂರೈಸಿರುವುದಕ್ಕೆ ಅಭಿನಂದನೆಗಳು. ಇನ್ನಾದರೂ ನಿಮ್ಮ ಸರ್ಕಾರ ಟೇಕ್ ಆಫ್ ಆಗಲಿ, ಸ್ಥಗಿತಗೊಂಡಿರುವ ರಾಜ್ಯದ ಅಭಿವೃದ್ಧಿಗೆ ಚಾಲನೆ ಸಿಗಲಿ ಎಂದು ಹಾರೈಸುತ್ತೇನೆ ಬಿಜೆಪಿ ಕುಹುಕವಾಡಿದೆ.