ನೋಟು ಅಮಾನ್ಯೀಕರಣ ನಂತರ ಬ್ಯಾಂಕ್‍ಗಳಲ್ಲಿ ಠೇವಣಿ ಮಾಡಿದ್ದ ಹಣ ವಾಪಸು ನೀಡಿಲ್ಲ: ನಿವೃತ್ತ ಸಹಾಯಕ ಖಜಾನೆ ಅಧಿಕಾರಿ ಆರೋಪ

Varta Mitra News

ಬೆಂಗಳೂರು, ಆ.30- ನೋಟು ಅಮಾನ್ಯೀಕರಣಗೊಂಡ ನಂತರ ಬ್ಯಾಂಕ್‍ಗಳಲ್ಲಿ ಠೇವಣಿ ಮಾಡಿದ್ದ ಹಣವನ್ನು ವಾಪಸು ನೀಡಿಲ್ಲ ಎಂದು ನಿವೃತ್ತ ಸಹಾಯಕ ಖಜಾನೆ ಅಧಿಕಾರಿ ಎಂ.ಬಿ.ಪೂಜಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನೋಟು ಅಮಾನ್ಯೀಕರಣ ಮಾಡುವ ಆದೇಶ ಬಂದಾಗ ನಾನು ವಿದೇಶಕ್ಕೆ ಹೋಗಿದ್ದೆ. ಹಾಗಾಗಿ ಆಜ್ಞೆಯಾಗಿದ್ದ ದಿನಾಂಕಕ್ಕೆ ಹಳೆ ನೋಟು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.
ಸರ್ಕಾರ ಮತ್ತೆ ದಿನಾಂಕವನ್ನು ವಿಸ್ತರಿಸಿತ್ತು. ಅದರಂತೆ 2017ರ ಮಾರ್ಚ್ 1ರಂದು ನಾನು ಚೆನ್ನೈ ರಿಸರ್ವ್ ಬ್ಯಾಂಕ್‍ನಲ್ಲಿ 1,60,000 ಹಣವನ್ನು ಠೇವಣಿ ಮಾಡಿದ್ದೇನೆ. ವಿದೇಶಕ್ಕೆ ಹೋದ ಹಾಗೂ ವಾಪಸು ಬಂದ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನನ್ನ ಖಾತೆಯ ವಿವರಗಳನ್ನು ವಿನಿಮಯಕ್ಕಾಗಿ ಯಾವುದೇ ಹಣವನ್ನು 10.11.2016ರಿಂದ 31.12.2016ರ ವರೆಗೆ ಜಮಾ ಮಾಡದಿದ್ದ ಬಗ್ಗೆ ಪತ್ರಗಳನ್ನು ರಿಜರ್ವ್ ಬ್ಯಾಂಕ್ ಆಫ್ ಚೆನ್ನೈಗೆ ಸಲ್ಲಿಸಿದ್ದೇನೆ. ಆದರೆ, ರಿಸರ್ವ್ ಬ್ಯಾಂಕ್ ಆಫ್ ಚೆನ್ನೈನ ಅಧಿಕಾರಿಗಳು ನಾನು ನೋಟುಗಳ ವಿನಿಮಯದ ಲಾಭವನ್ನು ಈಗಾಗಲೇ ಪಡೆದಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ.
ಆದರೆ, ಇದುವರೆಗೂ ನನಗೆ ಹಣವನ್ನು ವಾಪಸ್ ನೀಡಿಲ್ಲ. ಆದ್ದರಿಂದ ನನ್ನ ಹಣವನ್ನು ನನಗೆ ವಾಪಸು ಕೊಡಿಸಬೇಕೆಂದು ಮನವಿ ಮಾಡಿದರು.
ಒಂದು ವೇಳೆ ಹಣ ವಾಪಸು ಕೊಡದಿದ್ದರೆ ಉಪವಾಸವಿದ್ದು ಜೀವ ಬಿಡುವುದಾಗಿ ಎಂ.ಬಿ.ಪೂಜಾರ್ ಎಚ್ಚರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ