ಚೆನ್ನೈ : ಡಿಎಂಕೆ ಅಧ್ಯಕ್ಷರಾಗಿ ಎಂ ಕೆ ಸ್ಟಾಲಿನ್ ಆಯ್ಕೆಯಾಗುತ್ತಿದ್ದಂತೆ ಬೆದರಿಕೆ ಹಾಕಿದ್ದ ಸಹೋದರ ಎಂ ಕೆ ಅಳಗಿರಿ ಈಗ ಉಲ್ಟಾ ಹೊಡೆದಿದ್ದು, ನನ್ನನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರೆ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರ ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ಧ ಹೇಳಿದ್ದಾರೆ.
ಮಧುರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಳಗಿರಿ, ನಾವು ಡಿಎಂಕೆ ಸೇರಲು ಸಿದ್ಧರಿದ್ದೇವೆ; ಆದರೆ ಆತ (ಸ್ಟಾಲಿನ್) ನಮ್ಮನ್ನು ಸ್ವೀಕರಿಸಲು ಸಿದ್ಧನಿಲ್ಲ’ ಎಂದು ಹೇಳಿದರು. ಅಲ್ಲದೇ “ಸೆ.5ರಂದು ನಡೆಯಲಿರುವ ರ್ಯಾಲಿ ಯಲ್ಲಿ ಸೇರುವ ಪಕ್ಷದ ಎಲ್ಲ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಸಮಾಲೋಚಿಸಿ ಮುಂದಿನ ಕಾರ್ಯತಂತ್ರವನ್ನು ರೂಪಿಸುತ್ತೇನೆ’ ಎಂದು ಹೇಳಿದ್ದಾರೆ.
ಕೇವಲ ಸಾಮಾನ್ಯ ಸಭೆಯೇ ಪಕ್ಷ ಅಲ್ಲ ಎಂಬುದನ್ನು ಡಿಎಂಕೆ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಇದೇ ವೇಳೆ ಅಳಗಿರಿ ತಿಳಿಸಿದ್ದಾರೆ.
ಸ್ಟಾಲಿನ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾತ್ತಿದ್ದಂತೆ ಅಳಗಿರಿ “ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಅದರ ಪರಿಣಾಮವನ್ನು ಪಕ್ಷ ಎದುರಿಸಬೇಕಾದೀತು’ ಎಂಬ ಎಚ್ಚರಿಕೆ ನೀಡಿದ್ದರು.
2014ರಲ್ಲಿ ಕರುಣಾನಿಧಿ ಅವರು ಡಿಎಂಕೆ ಅಧ್ಯಕ್ಷರಾಗಿದ್ದಾಗ ಅಳಗಿರಿಯನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
Alagiri’s Climbdown: “Will Accept Stalin As Leader If DMK Takes Me Back”