ಹಾಸನ: ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ತೆಪ್ಪದಲ್ಲಿ ಹೊಳೆ ದಾಟುತ್ತಿದ್ದ ಸಮಯದಲ್ಲಿ ತೆಪ್ಪ ಮಗುಚಿದ ಪರಿಣಾಮ ನದಿಯಲ್ಲಿ ಬಿದ್ದ ಮಹಿಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಅವಗಡ ಸಕಲೇಶಪುರ ತಾಲ್ಲೂಕಿನ ಚಿಕ್ಕಂದೂರು ಗ್ರಾಮದಲ್ಲಿ ನಡೆದಿದೆ .
ಮಲ್ಲೇಶ್ ಅದೇ ಗ್ರಾಮ ನಿವಾಸಿ ತೆಪ್ಪ ಸಾಗಿಸುವಾಗ ಆಯ ತಪ್ಪಿ ಮಗುಚಿ ಸವಾರನು ಸೇರಿದಂತೆ ತೆಪ್ಪದಲ್ಲಿದ್ದ ಮೂವರು ಮಹಿಳೆಯರು ಹೊಳೆಗೆ ಬಿದ್ದಿದ್ದಾರೆ ತೆಪ್ಪದ ಸವಾರ ಹಾಗೂ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಇನ್ನೋರ್ವ ಮಹಿಳೆ ಮಹಿಳೆ ಮಾತ್ರ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ .
ನೀರುಪಾಲಾದ ಮಹಿಳೆ ಅದೇ ಚಿಕ್ಕಂದೂರು ಗ್ರಾಮ ನಿವಾಸಿ ಸಂಜಯ್ ಅವರ ಪತ್ನಿ ಸೌಮ್ಯ ಎಂದು ತಿಳಿದು ಬಂದಿದೆ. ಮಹಿಳೆಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆದಿದ್ದು, ಈ ವರೆಗೂ ಮಹಿಳೆಯ ಸುಳಿವು ದೊರೆತಿಲ್ಲ .