ನವದೆಹಲಿ: ಟೀಂ ಇಂಡಿಯಾದ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ 3ವಿಕೆಟ್ ಪಡೆಯುವ ಮೂಲಕ ಮುಂಬರುವ ಏಷ್ಯಾಕಪ್ಗೆ ಫಿಟ್ ಎಂಬುದನ್ನ ಸಾಬೀತು ಮಾಡಿದ್ದಾರೆ.
ಸದ್ಯ ಈಗ ನಡೆಯುತ್ತಿರುವ ಆಂಗ್ಲರ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭುವನೇಶ್ವರ್ ಕುಮಾರ್ ಬೆನ್ನು ನೋವಿನಿಂದ ಬಳಲಿದ್ದರು. ಈ ಹಿನ್ನಲೆಯಲ್ಲಿ ಭುವಿ ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದರು.
ಇದೀಗ ಎನ್ಸಿಎ ಅಕಾಡೆಮಿಯಲ್ಲಿ ಚಕಿತ್ಸೆ ಪಡೆದು ಅಭ್ಯಾಸ ಮಾಡಿದ ನಂತರ ಭುವಿ ಮತ್ತೆ ಫಿಟ್ ಆಗಿದ್ರು. ಬಿಸಿಸಿಐ ಕೂಡ ಭುವಿ ಫಿಟ್ ಆಗಿದ್ದಾರೆ ಎಂದು ಹೇಳಿತ್ತು. ದಕ್ಷಿಣ ಆಫ್ರಿಕಾ ಎ ತಂಡದ ಈ ಸ್ವಿಂಗ್ ಬೌಲರ್ ಸೊಗಸದ ಬೌಲಿಂಗ್ ಮಾಡಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ.
ಹ್ಯಾಟ್ರಿಕ್ನಿಂದ ವಂಚಿತರಾದ ಭುವಿ
ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ದದ ಎ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶದಿಂದ ವಂಚಿತರಾದ್ರು.ಕಾಯಾ ಜೊಂಡೊ, ಥೀನಿಸ್ ಬ್ರೂನ್ ವಿಕೆಟ್ ಪಡೆದರು ಆದರೆ ಮೂರನೇ ಎಸೆತದಲ್ಲಿ ಭುವಿ ಎಡವಿದ್ರು. ನಂತರ ಸಿಸಾಂಡ ಮಾಗಾಳಾ ವಿಕೆಟ್ ಪಡೆದು ಒಟ್ಟು ಮೂರು ವಿಕೆಟ್ ಪಡೆದು ಮಿಂಚಿದ್ರು.