ಪುಸ್ತಕ ಪಾರ್ಕ್ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು,ಆ.29- ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸುವ ಮತ್ತು ಅದಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪುಸ್ತಕ ಪಾರ್ಕ್ ಆರಂಭಿಸಲು ಚಿಂತನೆ ನಡೆಸಿದ್ದು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಜಯಮಾಲ ತಿಳಿಸಿದರು.
ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿದ್ದ ಬೆಳ್ಳಿಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಂಡನ್ ಮತ್ತಿತರ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಇರುವ ಗ್ರಂಥಾಲಯಗಳ ರೀತಿಯಲ್ಲೇ ರಾಜ್ಯದಲ್ಲೂ ಅಭಿವೃದ್ಧಿ ಮಾಡಬೇಕು ಎಂಬ ನನ್ನ ಅನಿಸಿಕೆ ಇದೆ. ಅದಕ್ಕಾಗಿ ಪುಸ್ತಕ ಪಾರ್ಕ್ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಕ್ರಿಯಾಶೀಲ ರಚನಾಕಾರರಲ್ಲಿ ಉತ್ತಮ ಆಲೋಚನೆಗಳಿದ್ದಾಗ ಮಾತ್ರ ದೇಶಕ್ಕೆ ಏನನ್ನಾದರೂ ಕೊಡುಗೆ ನೀಡಲು ಸಾಧ್ಯ. ಪ್ರಸ್ತುತ ಸನ್ನಿವೇಶದಲ್ಲಿ ಈ ಪುಸ್ತಕದ ತಂತ್ರಜ್ಞಾನಕ್ಕೆ ಲೇಖಕರು ಹಾಗೂ ಕವಿಗಳು ಶ್ರಮಿಸಬೇಕು. ಇದು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ತಲುಪುವಂತಾಗಬೇಕು ಎಂದು ಹೇಳಿದರು.
ಪುಸ್ತಕಗಳನ್ನು ಹಂಚುವ ಮತ್ತು ವಿತರಿಸುವ ಕಾರ್ಯವನ್ನು ನಮ್ಮ ಇಲಾಖೆ ನೋಡಿಕೊಳ್ಳಲು ಉತ್ಸುಕವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಲೇಖಕರಿಗೆ 1500 ರೂ. ನೀಡುತ್ತಿದ್ದ ಮಾಸಾಶನವನ್ನು ಮುಂದುವರೆಸಿಕೊಂಡು ಹೋಗಲಾಗುವುದು. ಪ್ರಕಾಶಕರನ್ನು ಗುರುತಿಸಿ ಸಂಧ್ಯಾ ಕಾಲದಲ್ಲಿ ಅವರಿಗೆ ನೆರವು ನೀಡುವ ಉದ್ದೇಶವಿದ್ದು , ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತಿದ್ದೇನೆ ಎಂದು ಹೇಳಿದರು.
ಸುಸಜ್ಜಿತ ಗ್ರಂಥಾಲಯ ಇಲ್ಲದೆ ಇದ್ದರೆ ಮನುಷ್ಯ ಮೂಕನಾಗುತ್ತಾನೆ.25 ವರ್ಷಗಳಿಂದ ಪುಸ್ತಕಗಳನ್ನು ಜನರಿಗೆ ಮುಟ್ಟಿಸುವ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಮಾಡುತ್ತಾ ಬಂದಿದೆ ಎಂದರು.
ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿ, ಸಚಿವರಾಗಿ, ಸಂಸದರಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಅವರಲ್ಲಿರುವ ಕವಿ ಮನಸು, ಇನ್ನೊಬ್ಬರನ್ನು ಪೆÇ್ರೀ ದ್ರೌಪದಿಯ ಬಗ್ಗೆ ಮಹಾಕಾವ್ಯಬರೆದಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಮೊಯ್ಲಿ ಅವರ ಕೊಡುಗೆ ಅಪಾರವಾಗಿದೆ. 25 ವರ್ಷಗಳ ಕಾಲಪುಸ್ತಕ ಪ್ರಾಧಿಕಾರವು ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಾ ಜನರಲ್ಲಿ ಸಾಹಿತ್ಯ ಮನಸ್ಸನ್ನು ಹೆಕ್ಕಿ ತೆಗೆಯುವಂತಹ ಪುಸ್ತಕಗಳನ್ನು ಹೊರ ತಂದಿರುವುದು ಶ್ಲಾಘನೀಯ ಎಂದರು.
ಪ್ರಾಧಿಕಾರದ ಕೆಲಸ ಕಾರ್ಯಗಳು ಹಲವು ಸಾಹಿತಿಗಳಲ್ಲಿ ಛಾಪನ್ನು ಮೂಡಿಸಿದೆ. ಹಿಂದಿನ ಪೀಳಿಗೆಯವರು ಮುಂದಿನ ಪೀಳಿಗೆಯವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಸ್ಪೂರ್ತಿ ನೀಡಬೇಕೆಂದು ಸಲಹೆ ನೀಡಿದರು.
1817ರಲ್ಲಿ ಕೋಲ್ಕತ್ತದಲ್ಲಿ ವಿಲಿಯಂ ಕೆ.ಡಿಯವರು ರಚಿಸಿದ್ದ ಲೇಖನವೊಂದು ಅಚ್ಚುಗೊಂಡು ಮುದ್ರಣಗೊಂಡಿತ್ತು. ನಂತರ ಪುಸ್ತಕ ಲೋಕ ಆರಂಭಗೊಂಡು ಇಂದು ಹೊಸ ಉದ್ಯಮವಾಗಿಯೇ ರೂಪುಗೊಂಡಿದೆ. ಹಲವರ ಜ್ಞಾನಾರ್ಜನೆಗೆ ನೆರವಾಗುತ್ತಿದೆ. ಸಮಾಜಕ್ಕೂ ಕೊಡುಗೆಗಳನ್ನು ನೀಡುತ್ತಿದೆ.ಜ್ಞಾನವನ್ನು ಪಸರಿಸುತ್ತಿದೆ ಎಂದರು.

ಯಾವುದೇ ದೇಶ ಅಥವಾ ನಾಡಿನಲ್ಲಿ ಸಂಸ್ಕøತಿ ಇಲ್ಲದಿದ್ದರೆ ಆತ್ಮವೇ ಶೂನ್ಯವಾದಂತೆ ಎಂದು ಸಂಸದ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು. ಯಾವುದೇ ನಾಡಿನ ಇತಿಹಾಸ ನೋಡಿದರೆ ಅಲ್ಲಿರುವ ಲೈಬ್ರರಿಗಳ ಮೇಲೆ ಯಾವ ಮಟ್ಟದ ದಾಳಿ ನಡೆದಿದೆ ಎಂಬುದು ತಿಳಿಯುತ್ತದೆ. ಇಂತಹ ಗ್ರಂಥಾಲಯಗಳಿಂದ ಧ್ವಂಸದಿಂದ ನಾಗರಿಕತೆಯೂ ವಿನಾಶ ಹೊಂದಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ವೀರಪ್ಪ ಮೊಯ್ಲಿ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರ ಭೂಪತಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಮಲ್ಲೇಪುರಂ ಜಿ.ವೆಂಕಟೇಶ್, ಪೆÇ್ರ.ಸಿದ್ದಲಿಂಗಯ್ಯ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರು,ಆ.29-ರಫೆಲ್‍ಯುದ್ಧ ವಿಮಾನ ಖರೀದಿ ವಿಚಾರದ ಬಗ್ಗೆ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೆಲ್ ಡೀಲ್ ಕುರಿತಂತೆ ಪ್ರಧಾನಿ ಅವರನ್ನು ಪ್ರಶ್ನಿಸಿ ಫ್ರಾನ್ಸ್ ಪ್ರವಾಸದ ಸಮಯದಲ್ಲಿ ಏಕಾಏಕಿ ಎಚ್‍ಎಎಲ್ ಜೊತೆ ಮಾಡಿಕೊಂಡ ಒಪ್ಪಂದ ಯಾಕೆ ರದ್ದು ಮಾಡಿದ್ದೀರಿ, ಕ್ಯಾಬಿನೆಟ್‍ನ ಗಮನಕ್ಕೂ ತಾರದೆ ಈ ಡೀಲ್ ನಡೆಸಲಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಇದಕ್ಕೆ ಜವಾಬ್ದಾರಿಯಾಗುತ್ತಾರೆ ಎಂದಿದ್ದಾರೆ.
ಇದರ ಒಟ್ಟು ಖರ್ಚು ಎಷ್ಟು ಎನ್ನುವುದರ ಬಗ್ಗೆ ಪ್ರಶ್ನೆ ಕೇಳುತ್ತಿದ್ದೇನೆ. ಮೇಕ್ ಇನ್ ಇಂಡಿಯ ಎಂದು ಹೇಳುವವರೇ ವಿದೇಶದೊಂದಿಗೆ ಇಂತಹ ಒಪ್ಪಂದ ಮಾಡಿಕೊಂಡಿದ್ದು ಸರಿಯೇ? ಆ ಕಂಪನಿಯ ವಿರುದ್ದ ನಾನು ಮಾತನಾಡುವುದಿಲ್ಲ. ಏಕೆಂದರೆ 500 ಕೋಟಿ ಮಾನಹಾನಿ ಪ್ರಕರಣವನ್ನು ದಾಖಲು ಮಾಡಬಹುದಾಗಿದೆ. ಆದರೆ ಇದರಿಂದಾಗಿ ಎಚ್‍ಎಎಲ್‍ಗೆ ತುಂಬ ನಷ್ಟವಾಗಿದೆ ಎಂದರು.
ಹೊಸ ಒಡಂಬಡಿಕೆ ಮಾಡಿಕೊಳ್ಳುವವರು ಒಂದೇ ಕಂಪನಿಗೆ ಆಹ್ವಾನ ಕೊಟ್ಟಿದ್ದು ಏಕೆ, 20 ದಿನಗಳ ಹಿಂದಷ್ಟೆ ನೋಂದಣಿಯಾಗಿ ಅನುಭವವೇ ಇಲ್ಲದ ಕಂಪನಿಗೆ ಹೇಗೆ ಡೀಲ್ ಕೊಟ್ಟಿರಿ ಎಂದು ವಾಗ್ದಾಳಿ ನಡೆಸಿದರು.

ಈ ವಿಚಾರದಲ್ಲಿ ಏನನ್ನೂ ಮುಚ್ಚಿಡುವ ಪ್ರಮೇಯವೇ ಇಲ್ಲ. ಆ ದೇವರೆ ಕೇಂದ್ರ ಸರ್ಕಾರ ಇದು ಸೀಕ್ರೆಟ್ ವಿಚಾರ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇಡೀ ಪ್ರಪಂಚಕ್ಕೆ ಗೊತ್ತಿದೆ. ಇದರ ಹಿಂದೆ ಏನೇನು ನಡೆಯುತ್ತಿದೆ ಎಂದು.
ಇದರ ಲೈಫ್ ಟೈಮ್ ಕಾಸ್ಟ್ ಬಗ್ಗೆಯೂ ಕೇಂದ್ರ ಯಾವುದೇ ಮಾಹಿತಿಯೂ ನೀಡುತ್ತಿಲ್ಲ. ಇದು ಹೇಗೆ ರಹಸ್ಯವಾಯಿತು. ರಹಸ್ಯ ಮಾಡುವ ವಿಷಯವೂ ಇದಲ್ಲ. ಇದು ದೇಶದ ಜನತೆಗೆ ಗೊತ್ತಾಗಬೇಕು. ಕೂಡಲೇ ಇದಕ್ಕೆ ಉತ್ತರ ನೀಡಲಿ. ಈ ಆರೋಪದಲ್ಲಿ ಮೋದಿಯೊಬ್ಬರೇ ಭಾಗಿಯಾಗಿದ್ದಾರೆ. ಪ್ರಧಾನಿ ಅವರೇ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪರಿಕ್ಕರ್ ಹೇಳಿದ್ದರು. ಅಲ್ಲದೆ ಪ್ರಧಾನಿ ಮತ್ತು ಫ್ರಾನ್ಸ್‍ಅಧ್ಯಕ್ಷರ ನಡುವೆ ಈ ವ್ಯವಹಾರ ನಡೆದಿದೆ ಎಂದು ಹೇಳಲಾಗಿದೆ.ಇದಕ್ಕೆ ಸಮಂಜಸ ಉತ್ತರ ನೀಡಲಿ ಎಂದು ಆಗ್ರಹಿಸಿದರು.

ಜಂಟಿ ಸಂಸದೀಯ ಸಮಿತಿಯಲ್ಲಿ ಇದರ ಬಗ್ಗೆ ಚರ್ಚೆಯಾಗಬೇಕು. ಅಲ್ಲಿ ನಿರ್ಧಾರ ಮಾಡಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಬೇಕು. ರೂಲಿಂಗ್ ಪಾರ್ಟಿ ಅವರೇ ಸಮಿತಿಯಲ್ಲಿ ಅಧ್ಯಕ್ಷರಾಗಿರುವುದರಿಂದ ಯಾವುದೇ ಅನುಕೂಲವಾಗುವುದಿಲ್ಲ. ಫಲಿತಾಂಶ ಏನು ಬರುತ್ತೆ ಎನ್ನುವುದಾದರು ತಿಳಿದುಕೊಳ್ಳಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ