ಶ್ರೀಶಾಂತ್ ನಿಷೇಧ ಪ್ರಕರಣ: ಅಂತಿಮ ವಿಚಾರಣೆ ನಡೆಸಲಿದೆ ಸುಪ್ರೀಂ ಕೋರ್ಟ್

ನವದೆಹಲಿ:ಬಿಸಿಸಿಐ ತನ್ನ ಮೇಲೆ ಹೇರಿರುವ ನಿಷೇಧ ಶಿಕ್ಷೆಯನ್ನ ಹಿಂಪಡೆಯುವಂತೆ ಕೇರಳದ ವೇಗಿ ಎಸ್.ಶ್ರೀಶಾಂತ್ ಸಲ್ಲಿಸಿರುವ ಅರ್ಜಿಯನ್ನ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಕೇರಳ ಹೈಕೋರ್ಟ್ ನಿಷೇಧವನ್ನ ರದ್ದು ಮಾಡಿತು.
ನ್ಯಾಯಾಲಯದ ಉಲ್ಲಂಘನೆಯಾಗಿಲ್ಲ
ಇದನ್ನ ಪ್ರಶ್ನಿಸಿ ಬಿಸಿಸಿಐ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯದ ಉಲ್ಲಂಘನೆಯಾಗಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ಹಳೆ ಆದೇಶವನ್ನ ಎತ್ತಿಹಿಡಿಯಿತು.
ಶ್ರೀಶಾಂತ್ ವಿಷಯದಲ್ಲಿ ಬಿಸಿಸಿಐ ಕಠಿಣ ನಿಲುವನ್ನ ಹೊಂದಿದೆ. ಸ್ಪಾಟ್ ಫಿಕ್ಸಿಂಗ್‍ನಲ್ಲಿ ಶ್ರೀಶಾಂತ್ ವಿರುದ್ಧ ಸಾಕಷ್ಟು ಸಾಕ್ಷ್ಯಧಾರಗಳನ್ನ ಹೊಂದಿದೆ. ದೂರವಾಣಿಯಲ್ಲಿ ಶ್ರೀಶಾಂತ್ ಮಾತನಾಡಿರುವ ದಾಖಲೆಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ