
ಬೆಂಗಳೂರು: 347ನೇ ಶ್ರೀ ರಾಘವೇಂದ್ರ ಅರಾಧನಾ ಮಹೋತ್ಸವ ಅಂಗವಾಗಿ ಮೂರನೇಯ ದಿನವಾದ ಇಂದು ಉತ್ತರ ಅರಾಧಾನ ಪ್ರಯುಕ್ತ ಪ್ರಕಾಶನಗರದ ಶ್ರೀ ರಾಘವೇಂದ್ರ ಬೃಂದಾವನ ಸನ್ನಿಧಿ ಟ್ರಸ್ಟ್ ವತಿಯಿಂದ ಬೆಳ್ಳಿ ರಥದಲ್ಲಿ ಗುರುರಾಯರ ಬಾವಚಿತ್ರ ಹಾಗೂ ಶ್ರೀ ವೆಂಕಟೇಶ್ವರ ಪ್ರತಿಮೆ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಸಾಗಿದರು.
ರಾಜಾಜಿನಗರ ವಿಠ್ಠಲ ಮಂದಿರವತಿಯಿಂದ ಗುರುರಾಯರು ಹಾಗೂ ಪಾಡುರಂಗ ವಿಠ್ಠಲ ದೇವರ ಪ್ರತಿಮೆ ಬೃಹತ್ ಮೆರವಣಿಗೆ ಯಲ್ಲಿ ಸಾಗಿದರು .
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ,ರಾಜಾಜಿನಗರ ಪ್ರಮುಖ ರಸ್ತೆಗಳಿಗೆ ತೆರಳಿದರು.