
ರಾಜಾಹುಲಿ ಚಿತ್ರ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನದ ಪಡ್ಡೆ ಹುಲಿ ಚಿತ್ರದಲ್ಲಿ ಗಾಯದ ನಡುವೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಭರ್ಜರಿ ಸಾಹಸ ಮಾಡಿದ್ದಾರೆ.
ದಾವಣಗೆರೆ ಸುತ್ತಮುತ್ತ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗಿದ್ದು ಈ ನಡುವೆ ಶ್ರೇಯಸ್ ಯಾವುದೇ ಡ್ಯೂಪ್ ಇಲ್ಲದೆ ಸಾಹಸ ದೃಶ್ಯಗಳಲ್ಲಿ ಭಾಗವಹಿಸಿದ್ದಾರೆ.
ದಾವಣಗೆರೆಯ ಜಿಎಂಐಟಿ ಕಾಲೇಜಿನಲ್ಲಿ ನಡೆದ ಸಾಹಸ ದೃಶ್ಯದಲ್ಲಿ ಶ್ರೇಯಸ್ ತಮ್ಮ ಮೈಗೆ ಅನೇಕ ಟ್ಯುಬ್ ಲೈಟ್ ಗಳಿಂದ ಹೊಡೆಸಿಕೊಂಡಿದ್ದು ಇದರಿಂದ ಅವರ ಕೈ ಹಾಗೂ ಭುಜಕ್ಕೆ ಗಾಯಗಳಾಗಿವೆ. ದೃಶ್ಯ ನೈಜವಾಗಿ ಮೂಡಿಬರಬೇಕೆಂಬ ಕಾರಣಕ್ಕೆ ಮೊದಲ ಚಿತ್ರದಲ್ಲೇ ಶ್ರೇಯಸ್ ಯಾವುದೇ ಡ್ಯೂಪ್ ಇಲ್ಲದೇ ನಟಿಸಿದ್ದಾರೆ.
ಪಡ್ಡೆಹುಲಿ ಚಿತ್ರವನ್ನು ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದು ಕೆಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಇನ್ನು ಶ್ರೇಯಸ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ.