ಕಲೆಗಳಲ್ಲಿ ಮೊಟ್ಟ ಮೊದಲು ಪ್ರಾರಂಭವಾದುದು ಚಿತ್ರಕಲೆ

 

ಬೆಂಗಳೂರು, ಆ.28- ಚಿತ್ರಕಲೆ ಅತ್ಯಂತ ಪುರಾತನವಾದ ಕಲೆ. ಕಲೆಗಳಲ್ಲಿ ಮೊಟ್ಟ ಮೊದಲು ಪ್ರಾರಂಭವಾದುದು ಚಿತ್ರಕಲೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪೆÇ್ರ.ಎಂ.ಎ.ಹೆಗಡೆ ತಿಳಿಸಿದರು.
ಕರ್ನಾಟಕ ಲಲಿತ ಕಲಾ ಅಕಾಡೆಮಿ ಕನ್ನಡ ಭವನದಲ್ಲಿಂದು ಆಯೋಜಿಸಿದ್ದ ತಿಂಗಳ ಚಿತ್ರ ಯುವ ಕಲಾವಿದರ ಕೃತಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಅಕ್ಷರಗಳನ್ನು ಕಲಿಯುವುದಕ್ಕಿಂತ ಮುಂಚೆ ಚಿತ್ರಗಳ ಮೂಲಕ ತಮ್ಮ ಭಾವನೆಗಳು ಮತ್ತು ಪರಂಪರೆಯನ್ನು ಅಭಿವ್ಯಕ್ತಪಡಿಸಲಾಗುತ್ತಿತ್ತು. ನಂತರ ಚಿತ್ರಕಲೆ ಪ್ರವೃತ್ತಿಯಾಗಿ ಬೆಳೆಯಿತು ಎಂದು ಹೇಳಿದರು.
ಚಿತ್ರಕಲೆ ರಚನೆಯಲ್ಲಿ ಕಲಾ ಪ್ರವೃತ್ತಿ ವಿಶೇಷ ಒಲವು, ಸೃಜನಶೀಲ ಪ್ರತಿಭೆ ಇರಬೇಕಾಗುತ್ತದೆ. ಮಾತಿನ ಮೂಲಕ ವ್ಯಕ್ತಪಡಿಸುವುದೆಲ್ಲವನ್ನೂ ಚಿತ್ರಗಳು ಅಭಿವ್ಯಕ್ತಪಡಿಸುತ್ತವೆ. ಯಕ್ಷಗಾನಕ್ಕೂ ಮತ್ತು ಚಿತ್ರಕಲೆಗೂ ಅವಿನಾಭಾವ ಸಂಬಂಧವಿದೆ. ಇವೆರಡರ ನಡುವಿನ ಆದಾಯ ಎಂತಹುದು ಎಂಬುದನ್ನು ತಿಳಿದಿರಬೇಕು. ಯಕ್ಷಗಾನದವರಿಗೆ ಚಿತ್ರಕಲೆ ಅವಶ್ಯಕ. ಚಿತ್ರಕಲೆಗಾರರಿಗೆ ಯಕ್ಷಗಾನವೂ ಅಗತ್ಯವಿರುತ್ತದೆ. ಕಲೆಗಾರರ ಭವಿಷ್ಯ ಉಜ್ವಲವಾಗಲಿ ಬೆಳಗಲಿ ಎಂದು ಹೆಗಡೆ ಆಶಿಸಿದರು.
ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪೆÇ್ರ.ಎಂ.ಜೆ.ಕಮಲಾಕ್ಷಿ ಮಾತನಾಡಿ, ಕಲಾಕೋರ್ಸ್ ಮುಗಿಸಿ ಬಹಳ ಜನ ಬರುತ್ತಿದ್ದಾರೆ. ಅಂತಹವರು ಇತರೆ ಕಲಾವಿದರೊಂದಿಗೆ ವಿಷಯ ವಿನಿಮಯ ಮಾಡಿಕೊಂಡಾಗ ಚಿತ್ರಕಲೆ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಹೇಳಿದರು.
ಚಿತ್ರಕಲೆ ರಚಿಸುವಾಗ ನಮ್ಮ ಸ್ವಂತಕ್ಕೆ ಎಷ್ಟು ಉಪಯೋಗ ಹಾಗೂ ಸಮಾಜಕ್ಕೆ ಎಷ್ಟು ಉಪಯೋಗ ಎಂಬುದನ್ನು ತಿಳಿಸಿದರು. ಕಲಿಕೆ ಯಾವಾಗಲೂ ನಿರಂತರವಾಗಿರಬೇಕು. ನಿಂತ ನೀರಾಗಬಾರದು ಎಂದರು.
ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಇಂದ್ರಮ್ಮ ಎಚ್.ವಿ.ಸೇರಿದಂತೆ ಮತ್ತಿತರರಿದ್ದರು.
ಇದೇ ವೇಳೆ ಭಾಗವಹಿಸಿದ್ದ ಚಿತ್ರ ಕಲೆಗಾರರಿಗೆ, ಪ್ರಮಾಣ ಪತ್ರ ವಿತರಿಸಲಾಯಿತು. ಮೂರು ದಿನಗಳ ಕಾಲ ಚಿತ್ರ ಪ್ರದರ್ಶನ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ