ಬೆಂಗಳೂರು, ಆ.28- ಕೆಪಿ ಅಗ್ರಹಾರ ಪೆÇಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಕೃಷ್ಣ ಅಲಿಯಾಸ್ ಮಾಗಡಿ ರೋಡ್ ಕೃಷ್ಣ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.
ಈತನ ವಿರುದ್ಧ ನಗರದ ಜ್ಞಾನಭಾರತಿ, ಮಾಗಡಿ ರಸ್ತೆ ಮತ್ತು ಕೆಪಿ ಅಗ್ರಹಾರ ಪೆÇಲೀಸ್ ಠಾಣೆಗಳಲ್ಲಿ ಒಟ್ಟು 12 ಪ್ರಕರಣಗಳು ವರದಿಯಾಗಿದ್ದು, ಈತ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ, ಹಲ್ಲೆ ಪ್ರಕರಣಗಳು ಮತ್ತು ಅಕ್ರಮ ಕೂಟ ಸೇರಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಅಪರಾಧವೆಸಗುವ ಪ್ರವೃತ್ತಿಯುಳ್ಳವನಾಗಿದ್ದ ಈತ ಸಮಾಜ ವಿದ್ರೋಹಿ ಮತ್ತು ಸಾರ್ವಜನಿಕರ ಸುವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳಿಂದ ತಡೆಗಟ್ಟಬೇಕಾದರೆ ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ಪಶ್ಚಿಮ ವಿಭಾಗದ ಅಪರ ಪೆÇಲೀಸ್ ಆಯುಕ್ತ ಬಿ.ಕೆ.ಸಿಂಗ್ ಅವರ ಮಾರ್ಗದರ್ಶನದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಪರಮೇಶ್ವರ ಹೆಗಡೆ ಮತ್ತು ಕೆಪಿ ಅಗ್ರಹಾರ ಠಾಣೆ ಇನ್ಸ್ಪೆಕ್ಟರ್ ಮಂಜು ಅವರು ಈತನ ವಿರುದ್ಧ ವರದಿ ತಯಾರಿಸಿ ಮಂಡಿಸಿದ ಮೇರೆಗೆ ಗೂಂಡಾಕಾಯ್ದೆಯಡಿ ಬಂಧನದಲ್ಲಿಡಲು ನಗರ ಪೆÇಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು.
ಕೆಪಿ ಅಗ್ರಹಾರ ಠಾಣೆ ಪೆÇಲೀಸರು ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಬಂಧನದ ಆದೇಶ ಜಾರಿಮಾಡಿದ್ದಾರೆ. ಪಶ್ಚಿಮ ವಿಭಾಗ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ರೌಡಿಗಳ ವಿರುದ್ಧ ಇನ್ನು ಮುಂದೆಯೂ ಸಹ ಇದೇ ರೀತಿ ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಚ್ಚರಿಸಿದ್ದಾರೆ.