ಬಸ್ ಹಾಗೂ ಕೋಚ್ ನಿರ್ಮಾಣ ಪ್ರದರ್ಶನ

 

ಬೆಂಗಳೂರು, ಆ.27- ನಗರದ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಆ.29ರಿಂದ 31ರವರೆಗೆ ಬಸ್‍ವಲ್ರ್ಡ್ ಇಂಡಿಯಾ ಇಂಟಡ್ರ್ಸ್ ಪ್ರದರ್ಶನ ನಡೆಯಲಿದೆ.
ಎಂಟನೇ ಆವೃತ್ತಿಯಬಸ್‍ವಲ್ರ್ಡ್ ಇಂಡಿಯಾ ಇಂಟಡ್ರ್ಸ್ ಪ್ರದರ್ಶನವು ಅತ್ಯಂತ ಸಮಗ್ರವಾದ ಅಂತಾರಾಷ್ಟ್ರೀಯ ಮಟ್ಟದ ಬಿ2ಬಿ ಎಗ್ಸಿಬಿಷನ್‍ಯಾಗಿದ್ದು, ವಿಶೇಷವಾಗಿ ಬಸ್ ಹಾಗೂ ಕೋಚ್ ಕೈಗಾರಿಕೆಗಳಿಗಾಗಿ ರೂಪುಗೊಂಡಿದೆ.
ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಅಂದು ಬೆಳಗ್ಗೆ 11 ಗಂಟೆಗೆ ಬಿಐಇಸಿಯ ಜಕರಾಂಡ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಬೆಲ್ಜಿಯಂನ ಕೌನ್ಸುಲ್ ಜನರಲ್ ಮಾರ್ಕ್ ವ್ಯಾನ್ ಡೇ ವ್ರೆಕೆನ್ ಭಾಗವಹಿಸಲಿದ್ದಾರೆ ಎಂದು ಬಸ್‍ವಲ್ರ್ಡ್ ಇಂಟರನ್ಯಾಷನಲ್ ಅಧ್ಯಕ್ಷ ಡಾ.ದೀದರ್ ರಾಮ್ದೋತ್ ತಿಳಿಸಿದ್ದಾರೆ.

ದೇಶದಲ್ಲಿ ಹೆಚ್ಚಿನ ನಾಗರಿಕರು ಸಾರಿಗೆಗೆ ಅವಲಂಬಿಸಿರುವುದು ಬಸ್‍ನ್ನು ಹಾಗೂ ಬಸ್‍ವಲ್ರ್ಡ್ ಇಂದಿಯಾ 2018 ಈ ವಿಚಾರವಾಗಿ ಅತ್ಯಾಕರ್ಷಕ ಅವಕಾಶವನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಬಸ್ ಹಾಗೂ ಕೋಚ್ ನಿರ್ಮಾಣ ಮಾಡುವವರು, ಸಲಕರಣೆಗಳ ಪೂರೈಕೆದಾರರು, ತಂತ್ರಜ್ಞಾನ ಪೂರೈಕೆದಾರರು ಹಾಗೂ ಮಾರುಕಟ್ಟೆ ನಾಯಕತ್ವ ಹೊಂದಿದವರು ತಮ್ಮ ಅತ್ಯಾಧುನಿಕ ಉತ್ಪನ್ನವನ್ನು ಪ್ರದರ್ಶಿಸಲು, ತಂತ್ರಜ್ಞಾನ, ಸೇವೆ ಹಾಗೂ ಪರಿಹಾರ ಕಾರ್ಯವನ್ನು ವಿವರಿಸಲು ಇದು ಸೂಕ್ತ ವೇದಿಕೆಯಾಗಿದೆ ಎಂದಿದ್ದಾರೆ
ಕಂಪನಿಗಳಿಗೆ ಈ ವೇದಿಕೆಯು ತಮ್ಮನ್ನು ತಾವು ಉದ್ಯಮಕ್ಕೆ ಪರಿಚಯಿಸಿಕೊಳ್ಳಲು, ವ್ಯಾಪಾರ ಅವಕಾಶಗಳು ಏನಿವೆ ಎಂದು ತಿಳಿಯಲು, ತಮ್ಮನ್ನು ತಾವು ಅನಾವರಣಗೊಳಿಸಿಕೊಳ್ಳಲು ಅವಕಾಶ ಒದಗಿಸುತ್ತದೆ. ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಹಾಗೂ ಈ ಕ್ಷೇತ್ರದ ಸಂಪರ್ಕ ಸಾಧಿಸುವ ದೃಷ್ಟಿಯಲ್ಲಿ ಇದು ಸಹಕಾರಿ ಪ್ರಸ್ತುತ ಹಾಗೂ ಸಂಭಾವ್ಯ ಗ್ರಾಹಕರನ್ನು ಹೊಂದಲು ಇದು ವೇದಿಕೆಯಾಗಿ ಲಭಿಸಲಿದೆ.
ಈ ವರ್ಷದ ವಸ್ತು ಪ್ರದರ್ಶನದಲ್ಲಿ 115ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದರಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರದರ್ಶಕರು ಸೇರಿದ್ದಾರೆ.
ಆರ್ಮನಿ, ಬೆಲ್ಜಿಯಂ, ಟರ್ಕಿ, ಚೈನಾ, ಬೆಲಾರಸ್, ಕೋರಿಯಾ, ಆಸ್ಟ್ರಿಯಾ ಸೇರಿದಂತೆ ಹಲವು ರಾಷ್ಟ್ರದ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಟಾಟಾ ಮೋಟಾರ್ಸ್, ಫೆÇೀರ್ಸ್ ಮೋಟಾರ್ಸ್, ಎಂಜಿ ಆಟೊಮೋಟಿವ್, ಎಂಆರ್‍ಎಫ್ ಅಂಡ್ ಸೋಬರ್ಸ್ ಲಿಮಿಟೆಡ್ ಇತ್ಯಾದಿ ಕಂಪನಿಗಳು ಪಾಲ್ಗೊಳ್ಳಲಿರುವ ಪ್ರಮುಖ ಕಂಪನಿಗಳ ಪಟ್ಟಿಯಲ್ಲಿವೆ. ದೇಶದ ಪ್ರಮುಖ ಕಂಪನಿಗಳು ಈ ಮೂರು ದಿನದ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ