ಮಾದಕ ವಸ್ತುಗಳನ್ನು ವಿರೋಧಿಸಿ ಬೆಂಗಳೂರು ಪಶ್ಚಿಮ ವಿಭಾಗದ ಪೆÇಲೀಸರು ನಗರದಲ್ಲಿ ಮ್ಯಾರಥಾನ್

 

ಬೆಂಗಳೂರು, ಆ.27- ಮಾದಕ ವಸ್ತುಗಳನ್ನು ವಿರೋಧಿಸಿ ಬೆಂಗಳೂರು ಪಶ್ಚಿಮ ವಿಭಾಗದ ಪೆÇಲೀಸರು ನಗರದಲ್ಲಿ ಮ್ಯಾರಥಾನ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಪ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಕಾರ್ಯಕ್ರಮದಲ್ಲಿ ನಗರದ ಪೆÇಲೀಸ್ ಆಯುಕ್ತರಾದ ಸುನೀಲ್‍ಕುಮಾರ್, ನಟಿ ಶರ್ಮಿಳಾ ಮಾಂಡ್ರೆ, ನಟ ದಿಗಂತ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸರ್ವಜನಿಕರು, ಪೆÇಲೀಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಪ್ರೀಡಂಪಾರ್ಕ್‍ನಿಂದ ಆನಂದ್‍ರಾವ್ ಸರ್ಕಲ್ ಮೂಲಕ ಮೆಜೆಸ್ಟಿಕ್‍ವರೆಗೂ ಮ್ಯಾರಥಾನ್ ನಡೆಸಿ ಮಾದಕ ವಸ್ತು ಸೇವನೆಯಿಂದಾಗಿ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಯುವಕರಲ್ಲಿ ಹೆಚ್ಚಾಗುತ್ತಿರುವ ಡ್ರಗ್ಸ್ ವ್ಯಸನದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪೆÇಲೀಸರು, ಈ ಜಾಲದಲ್ಲಿ ಸಿಲುಕಿಕೊಂಡು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಎಚ್ಚರಿಕೆಯ ಸಂದೇಶ ನೀಡಿದರು.
ಡ್ರಗ್ಸ್ ವ್ಯಸನದ ಬಗ್ಗೆ ಎಚ್ಚರಿಕೆಯ ಲೋಗೋಗಳನ್ನು ಪ್ರದರ್ಶಿಸಿ ಮೆರವಣಿಗೆಯುದ್ದಕ್ಕೂ ಜಾಗೃತಿ ಮೂಡಿಸಲಾಯಿತು. ಈ ಮ್ಯಾರಥಾನ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ