ಬೆಂಗಳೂರು,ಆ.27- ನಗರದಲ್ಲಿ ಆರಂಭಿಸಲು ಉದ್ದೇಶಿಸಿರುವ ಎಲೆಕ್ಟ್ರಿಕ್ ಬಸ್‍ಗಳ ಸೇವೆಗೆ ಒಂದು ಮಿಲಿಯನ್ ಡಾಲರ್ಸ್ ತಾಂತ್ರಿಕ ನೆರವು ನೀಡಲು ಜರ್ಮನ್ ದೇಶ ಸಮ್ಮತಿಸಿದೆ. ಈ ಸಂಬಂಧ ಶೀಘ್ರ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ವಿಧಾನಸೌಧದಲ್ಲಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಜರ್ಮನ್ ಪ್ರತಿನಿಧಿಗಳಾದ ಮುನ್ಸಿಪಲ್ ಆರ್ಥಿಕ ತಜ್ಞರಾದ ಜರ್ಗನ್ ಬೌವ್ಮಾನ್ನ , ಸಿ40 ಸಿಟಿ ಮುಖ್ಯಸ್ಥ ಜೇಮ್ಸ್ ಅಲೆಗ್ಸಾಂಡರ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದರು.
ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಡೀಸೆಲ್ ಬಸ್‍ಗಳ ಬದಲು ಎಲೆಕ್ಟ್ರಿಕಲ್ ಬಸ್‍ಗಳನ್ನು ರಸ್ತೆ ಗಿಳಿಸಲು ಚಿಂತನೆ ನಡೆಸಗಿದೆ. ಇದರಿಂದ ವಾಯುಮಾಲಿನ್ಯ ಸಾಕಷ್ಟು ನಿಯಂತ್ರಣಕ್ಕೆ ಬರಲಿದೆ ಎಂದರು.
ಎಲೆಕ್ಟ್ರಿಕಲ್ ಬಸ್‍ಗಳ ದರ ಹೆಚ್ಚಿರಬಹುದು. ಆದರೆ ಒಂದು ಮಿಲಿಯನ್ ಟೆಕ್ನಿಕಲ್ ಅಸಿಸ್ಟೆಂಟ್ಸ್ ನೀಡಲು ಜರ್ಮನ್ ಸಿದ್ದವಿರುವುದಾಗಿ ಅಲ್ಲಿನ ಪ್ರತಿನಿಧಿಗಳು ತಿಳಿಸಿದ್ದಾರೆ.
ಇದಕ್ಕೆ ಒಪ್ಪಿರುವ ತಾವು ಸಾರಿಗೆ ಸಚಿವರೊಂದಿಗೆ ಚರ್ಚಿಸಿ ನಂತರ ಒಪ್ಪಂದ ಮಾಡಿಕೊಳ್ಳುವುದಾಗಿ ವಿವರಿಸಿದರು.