ಎರಡು ಬಾರಿ ಟೋಲ್ ಬಿಲ್ ನೀಡಿದ್ದನ್ನು ಪ್ರಶ್ನಿಸಿದ ಲಾರಿ ಚಾಲಕನ ಮೇಲೆ ಟೋಲ್ ಸಂಗ್ರಹ ಮಾಡುವ ಸಿಬ್ಬಂದಿ ಹಲ್ಲೆ

 

ಬೆಂಗಳೂರು, ಆ.27- ಎರಡು ಬಾರಿ ಟೋಲ್ ಬಿಲ್ ನೀಡಿದ್ದನ್ನು ಪ್ರಶ್ನಿಸಿದ ಲಾರಿ ಚಾಲಕನ ಮೇಲೆ ಟೋಲ್ ಸಂಗ್ರಹ ಮಾಡುವ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ನೆಲಮಂಗಲ ಟೋಲ್ ಗೇಟ್ ಬಳಿ ಕಳೆದ ರಾತ್ರಿ ನಡೆದಿದೆ.
ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಬಂದ ಲಾರಿ ಚಾಲಕ ಜಾಸ್ ಟೋಲ್ ನಲ್ಲಿ ಬಿಲ್‍ಗೆ ಹಣ ನೀಡಿದ್ದಾರೆ. ಮೊದಲು ಟಿಕೆಟ್ ನೀಡಿದ ಸಿಬ್ಬಂದಿ ನಂತರ ಮತ್ತೊಂದು ಟಿಕೆಟ್ ನೀಡಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಲಾರಿ ಚಾಲಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ನೆಲಮಂಗಲ ಗ್ರಾಮಾಂತರ ಠಾಣಾ ಪೆÇಲೀಸರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ