
ಶ್ರೀನಗರ: ಭಾರತೀಯ ಸೇನಾ ಪಡೆ ಭಾನುವಾರ ಮಹತ್ವದ ಕಾರ್ಯಾಚರಣೆ ನಡೆಸಿದ್ದು,ಕುಪ್ವಾರದ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ನತ್ತ ಗಡಿ ಹೊರ ನುಸುಳಲು ಸಿದ್ದವಾಗಿದ್ದ ನಾಲ್ವರು ಅಲ್ ಬದ್ರ್ ಸಂಘಟನೆಯ ಉಗ್ರರನ್ನು ಜೀವಂತವಾಗಿ ಸೆರೆ ಹಿಡಿದಿದೆ.
ಸ್ಥಳದಲ್ಲಿ ಗುಂಡಿನ ಕಾಳಗ ನಡೆದಿದ್ದು , ಬಳಿಕ ನಾಲ್ವರು ಉಗ್ರರು ಶರಣಾಗಿದ್ದಾರೆ ಎಂದು ಸೇನೆ ತಿಳಿಸಿದೆ.
ಬಂಧನಕ್ಕೊಳಗಾಗಿರುವ ಉಗ್ರರು ಹೊಸದಾಗಿ ನೇಮಕಗೊಂಡವರು ಎಂದು ಸೇನಾ ಮೂಲಗಳು ತಿಳಿಸಿವೆ.
ಸೇನೆಯ ಕಾರ್ಯಾಚರಣೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೆರವು ನೀಡಿದ್ದಾರೆ.
ಜೊತೆಯಲ್ಲಿದ್ದ ಇನ್ನೂ ಮೂವರು ಉಗ್ರರು ಅಡಗಿಕೊಂಡಿದ್ದು ಅವರಿಗಾಗಿ ಸೇನೆ ಕಾರ್ಯಾಚರಣೆ ಮುಂದುವರಿಸಿರುವುದಾಗಿ ತಿಳಿದು ಬಂದಿದೆ.