ಕಿಂಗ್ಸ್ ಟನ್: ಪಾಕಿಸ್ತಾನದ ಎಡಗೈ ವೇಗಿ ಮೊಹ್ಮದ್ ಇರ್ಫಾನ್ ಟಿ20 ಕ್ರಿಕೆಟ್ ಇತಿಹಾಸದಲ್ಲೆ ಅದ್ಬುತ ಬೌಲಿಂಗ್ ಮಾಡಿ ಹೊಸ ದಾಖಲೆ ಬರೆದಿದ್ದಾರೆ.
ಕೆರೆಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಬಾರ್ಬೊಡೊಸ್ ಟ್ರಿಡೆಂಟ್ಸ್ ಪರ ಆಡುತ್ತಿರುವ ಮೊಹ್ಮದ್ ಇರ್ಫಾನ್ ಸೇಂಟ್ ಕಿಟ್ಸ್ ತಂಡದ ವಿರುದ್ದ ಸೆನ್ಸೆಶನಲ್ ಸ್ಪೆಲ್ ಮಾಡಿದ್ದಾರೆ.
ಟಿ 20 ಕ್ರಿಕೆಟ್ ಇತಿಹಾಸದಲ್ಲೆ ಮೊಹ್ಮದ್ ಇರ್ಫಾನ್ ಎಕನಾಮಿಕಲ್ ಸ್ಪೆಲ್ ಮಾಡಿದ್ದರೆ. ನಾಲ್ಕು ಓವರ್ಗಳನ್ನ ಮಾಡಿ ಕೆವಲ 1 ರನ್ ನೀಡಿ ಎರಡು ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.
ಎಡಗೈ ಪೇಸರ್ ಮೊಹ್ಮದ್ ಇರ್ಫಾನ್
ಏಳು ಅಡಿ ಎತ್ತರವಿರುವ ಮೊಹ್ಮದ್ ಇರ್ಫಾನ್ ತಮ್ಮ ನಾಲ್ಕು ಓವರ್ಗಳಲ್ಲಿ ಯಾವುದೇ ರನ್ ನೀಡದೇ 2 ವಿಕೆಟ್ ಪಡೆದು ದಾಖಲೆ ಬರೆಯಬಹುದಿತ್ತು. ಆದ್ರೆ ಮೊಹ್ಮದ್ ಇರ್ಫಾನ್ ನಾಲ್ಕನೆ ಓವರ್ನ ಕೊನೆಯ ಎಸೆತದಲ್ಲಿ ಒಂದು ರನ್ ಬಿಟ್ಟುಕೊಟ್ಟು ಎಡವಟ್ಟು ಮಾಡಿಕೊಂಡ್ರು.
ಕ್ರಿಸ್ ಗೇಲ್ ಮತ್ತು ಎವಿನ್ ಲಿವೀಸ್ ವಿಕೆಟ್ ಪಡೆದು ಮೂರು ಓವರ್ ಮೇಡನ್ ಮಾಡಿ ಕೇವಲ ಒಂದು ರನ್ ಕೊಟ್ಟಿದ್ದು ಕ್ರಿಕೆಟ್ ಇತಿಹಾಸದ ದಾಖಲೆಯ ಪುಟಕ್ಕೆ ಸೇರಿತು. ಮೊಹ್ಮದ್ ಇರ್ಫಾನ್ ಆರಂಭಿಕ ಆಘಾತ ನೀಡಿದ ಹೊರತಾಗಿಯೂ ಸೇಂಟ್ ಕಿಟ್ಸ್ ತಂಡ 6 ವಿಕೆಟ್ಗಳ ಜಯ ಪಡೆಯಿತು.