ಉದಯಭಾನು ಉನ್ನತ ಕೇಂದ್ರ ಗವಿಪುರದಲ್ಲಿ ಪ್ರಾರಂಭ

Varta Mitra News

 

ಬೆಂಗಳೂರು,ಆ.26-ಉಯದಭಾನು ಕಲಾಸಂಘವು 1965ರಲ್ಲಿ ಸ್ಥಾಪನೆಯಾಗಿ ಹಲವು ಯುವಕರ ಕನಸು ನನಸು ಮಾಡಿದೆ ಎಂದು ಸಂಘದ ಸಂಸ್ಥಾಪಕ ಗೌರವ ಕಾರ್ಯದರ್ಶಿ ಎಂ.ನರಸಿಂಹ ತಿಳಿಸಿದರು.
ಬಸವನಗುಡಿಯಲ್ಲಿ ಉದಯಭಾನು ಕಲಾಸಂಘದ ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ಮಾತನಾಡಿದ ಅವರು, ಪ್ರಸ್ತುತ ಉದಯಭಾನು ಉನ್ನತ ಕೇಂದ್ರವನ್ನು ಗವಿಪುರದಲ್ಲಿ ಪ್ರಾರಂಭಿಸಲಾಗಿದ್ದು, ಅಧ್ಯಯನಾಂಗದಡಿ ಜೀವನದ ವಿಭಿನ್ನ ಕ್ಷೇತ್ರಗಳಲ್ಲಿ ನಿಂತರ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು.

ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿ ವಿಜ್ಞಾನ, ತಂತ್ರಜ್ಞಾನ ವಾಣಿಜ್ಯ ಮತ್ತು ನಿರ್ವಹಣೆ ಸಮಾಜ ವಿಜ್ಞಾನ,ಅಧ್ಯಯನಾಂಗಗಳು ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ನಾರಾಯಣ ನೇತ್ರಾಲಯದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ.ಭುಜಂಗ ಶೆಟ್ಟಿ ಮಾತನಾಡಿ, 200ನೇಯ ಕಣ್ಣಿನ ಪೆÇರೆ, ಶಸ್ತ್ರ ಚಿಕಿತ್ಸೆಗಾಗಿ ಉಚಿತ ಕಣ್ಣು ಪರೀಕ್ಷೆ ಶಿಬಿರವನ್ನು ಏರ್ಪಡಿಸಲು ಉದಯಭಾನು ಕಲಾ ಸಂಘವು ಮುಂದಾಗಿದೆ. ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಈ ಅವಕಾಶ ಮಾಡಿಕೊಟ್ಟಿರುವ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ರೀತಿಯ ಎಲ್ಲಾ ಶಿಬಿರಗಳಿಗೆ ಅವಕಾಶ ವಂಚಿತರಿಗೆ ಅಸಕ್ತರಾದಿಯಾಗಿ ನೇರ ತಪಾಸಣೆ, ಪೆÇರೆ ಶಸ್ತ್ರ ಚಿಕಿತ್ಸೆ ಹಾಗೂ ನೇತ್ರ ಸಂಬಂಧಿತ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ನಾರಾಯಣ ನೇತ್ರಾಲಯ ಸಿದ್ಧವಿದೆ ಎಂದರು.
ಈ ಶಿಬಿರದಲ್ಲಿ ಭಾಗವಹಿಸಿರುವ ಎಪಿಎಸ್ ಕಾಲೇಜಿನ 30 ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಿ ದೃಷ್ಟಿ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಎಂ.ನರಸಿಂಹ ವೈದ್ಯರಾದ ಎಂ.ವಿ.ಶಶಿಧರ್, ನಾಗರತ್ನ ಮುಂತಾದವರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ