ನವದೆಹಲಿ:ಆ-26: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಖಾಡಕ್ಕೆ ಇಳಿಯಲು ಮೂರು ಸಮಿತಿಗಳನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಚಿಸಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರವನ್ನು ಉರುಳಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ರಾಹುಲ್ ರಣತಂತ್ರ ರೂಪಿಸಿತ್ತಿದ್ದಾರೆ.
ಒಂಬತ್ತು ಸದಸ್ಯರನ್ನು ಒಳಗೊಂಡ ಕೋರ್ ಕಮಿಟಿಯಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಗುಲಾಬ್ ನಬಿ ಅಜಾದ್, ಮಲ್ಲಿಕಾರ್ಜುನ್ ಖರ್ಗೆ, ಎ.ಕೆ.ಆಟೋನಿ, ಅಶೋಕ್ ಹೆಲ್ಹೋಟ್, ಅಹಮದ್ ಪಟೇಲ್, ರಮೇಶ್ ಜೈರಾಮ್, ರಣ್‌ದೀಪ್ ಸುರ್ಜಿವಾಲಾ, ಕೆ.ಸಿ.ವೇಣುಗೋಪಾಲ್ ಇದ್ದಾರೆ.
ಶನಿವಾರ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಉನ್ನತ ಸಭೆಯಲ್ಲಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪಾಲ್ಗೊಂಡು ಚರ್ಚೆ ನಡೆಸಿ ಈ ಮೂರು ಸಮಿತಿಗಳನ್ನು ರಚನೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧಿಕೃತ ಮೂಲಗಳ ಪ್ರಕಾರ ಎಕೆ ಆ್ಯಂಟನಿ ನೇತೃತ್ವದಲ್ಲಿ ಕೋರ್ ಕಮಿಟಿ, ಮನ್ ಪ್ರೀತ್ ಬಾದಲ್ ಅವರ ನೇತೃತ್ವದಲ್ಲಿ ಚುನಾವಣಾ ಪ್ರಣಾಳಿಕೆ ರಚನಾ ಸಮಿತಿ ಮತ್ತು ಭಕ್ತ್ ಚರಣದಾಸ್ ಅವರ ನೇಚತೃತ್ವದಲ್ಲಿ ಪ್ರಚಾರ ಸಮಿತಿಯನ್ನು ರಚನೆ ಮಾಡಲಾಗಿದೆ.
ಇನ್ನು, ಕಾಂಗ್ರೆಸ್ನ ಪ್ರಣಾಳಿಕೆ ಸಮಿತಿಗೆ ರಾಜ್ಯಸಭಾ ಸದಸ್ಯ ಪ್ರೊ| ಎಂ.ವಿ. ರಾಜೀವ್ ಗೌಡ ಅವರನ್ನು ಸೇರಿಸಿಕೊಳ್ಳಲಾಗಿದೆ. ಈ ಸಮಿತಿಯಲ್ಲಿ 19 ಮಂದಿ ಇದ್ದು, ಎಲ್ಲರೂ ಪ್ರಬುದ್ಧ ಚಿಂತಕರೇ ಆಗಿದ್ದಾರೆ. ಸ್ಯಾಮ್ ಪಿತ್ರೋಡಾ, ಶಶಿ ತರೂರ್, ಪಿ. ಚಿದಂಬರಮ್, ಮೀನಾಕ್ಷಿ ನಟರಾಜನ್, ಜೈರಾಮ್ ರಮೇಶ್ ಮೊದಲಾದ ಅನುಭವಿ ಅರ್ಥಶಾಸ್ತ್ರಜ್ಞರು, ಹಣಕಾಸು ತಜ್ಞರು, ಆಡಳಿತಗಾರರು ಈ ಸಮಿತಿಯಲ್ಲಿದ್ದಾರೆ. ಇವರ ಮಧ್ಯೆ ರಾಜೀವ್ ಗೌಡ ಅವರಿಗೂ ಮಣೆ ಹಾಕಿರುವುದು ವಿಶೇಷ. ಬೆಂಗಳೂರಿನ ಐಐಎಂನಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ರಾಜೀವ್ ಗೌಡ ಅವರು ರಿಸರ್ವ್ ಬ್ಯಾಂಕ್ನ ಮಂಡಳಿಯ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ಹಲವು ವರ್ಷಗಳಿಂದ ಕಾಂಗ್ರೆಸ್ ಜೊತೆ ಜೋಡಿಸಿಕೊಂಡಿರುವ ರಾಜೀವ್ ಗೌಡ ಈ ಹಿಂದೆ ಪಕ್ಷದ ವಿವಿಧ ಸ್ತರಗಳಲ್ಲಿ ಪ್ರಣಾಳಿಕೆ ರಚನೆಯಲ್ಲಿ ರಚನಾತ್ಮಕ ಪಾತ್ರ ವಹಿಸಿದ್ದಾರೆ.
2014ರಿಂದಲೂ ಅವರು ಕಾಂಗ್ರೆಸ್ನ ರಾಜ್ಯಸಭಾ ಸದಸ್ಯರಾಗಿ ಸಂಸತ್ನಲ್ಲಿ ಗಂಭೀರ ಚರ್ಚೆಯಲ್ಲಿ ಭಾಗವಹಿಸಿದ್ದಾರೆ.
ಪ್ರಿಯಾಂಕಾ ಹೆಸರೇ ಇಲ್ಲ ಕಳೆದ ಚುನಾವಣೆಯಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಹೆಸರು ಯಾವ ಸಮಿತಿಯಲ್ಲಿಯೂ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
ಇನ್ನೊಂದೆಡೆ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಾಮಾಜಿಕ ಜಾಲ ತಾಣದ ಮುಖ್ಯಸ್ಥೆಯಾಗಿ ಹಲವು ಮಂದಿಯ ಹುಬ್ಬೇರಿಸಿದ್ದ ದಿವ್ಯಾ ಸ್ಪಂದನ ಅಕಾ ನಟಿ ರಮ್ಯಾ ಅವರು ಹಲವು ತಿಂಗಳಿಂದ ಬಹುತೇಕ ಅಜ್ಞಾತವಾಸಿಯಾಗಿಬಿಟ್ಟಿದ್ದರು. ಕಾಂಗ್ರೆಸ್ನ ಜಾಲ ತಾಣದಿಂದ ಅವರು ದೂರವಾಗಿದ್ದರು.
ರಾಜಕೀಯದಿಂದ ಹಿಂದೆ ಸರಿದು ಅವರು ಸಿನಿಮಾ ಕ್ಷೇತ್ರಕ್ಕೆ ಮರಳುತ್ತಾರೆಂಬ ಗಟ್ಟಿ ಸುದ್ದಿ ಓಡಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಪ್ರಚಾರ ಸಮಿತಿಯಲ್ಲಿ ಸ್ಥಾನ ಪಡೆಯುವ ಮೂಲಕ ರಮ್ಯಾ ಅವರು ಪಕ್ಷದೊಳಗಿನ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.
ಉಳಿದಂತೆ ಸಮಿತಿಯ ಪಟ್ಟಿ ಈ ರೀತಿ ಇದೆ.
ಕಾಂಗ್ರೆಸ್ ಪ್ರಚಾರ ಸಮಿತಿ:
ಭಕ್ತಚರಣ್ ದಾಸ್
ಪ್ರವೀಣ್ ಚಕ್ರವರ್ತಿ
ಮಿಲಿಂದ್ ದೇವೋರಾ
ಕೇತ್ಕರ್ ಕುಮಾರ್
ಪವನ್ ಖೇರಾ
ವಿ.ಡಿ. ಸತೀಶನ್
ಆನಂದ್ ಶರ್ಮಾ
ಜೈವೀರ್ ಶೆರ್ಗಿಲ್
ರಾಜೀವ್ ಶುಕ್ಲಾ
ದಿವ್ಯಾ ಸ್ಪಂದನ (ರಮ್ಯಾ)
ರಣದೀಪ್ ಸುರ್ಜೆವಾಲ
ಪ್ರಮೋದ್ ತಿವಾರಿ
ಕೋರ್ ಗ್ರೂಪ್ ಕಮಿಟಿ
ಎ.ಕೆ. ಆಂಟನಿ
ಗುಲಾಮ್ ನಬಿ ಆಜಾದ್
ಪಿ. ಚಿದಂಬರಂ
ಅಶೋಕ್ ಗೆಹ್ಲೋಟ್
ಮಲ್ಲಿಕಾರ್ಜುನ ಖರ್ಗೆ
ಅಹ್ಮದ್ ಪಟೇಲ್
ಜೈರಾಮ್ ರಮೇಶ್
ರಣದೀಪ್ ಸುರ್ಜೆವಾಲ
ಕೆ.ಸಿ. ವೇಣುಗೋಪಾಲ್
ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಸಮಿತಿ
ಮನಪ್ರೀತ್ ಬಾದಲ್
ಪಿ. ಚಿದಂಬರಂ
ಸುಷ್ಮಿತಾ ದೇವ್
ಪ್ರೊ| ರಾಜೀವ್ ಗೌಡ
ಭೂಪೇಂದ್ರ ಸಿಂಗ್ ಹೂಡಾ
ಜೈರಾಮ್ ರಮೇಶ್
ಸಲ್ಮಾನ್ ಖುರ್ಷಿದ್
ಬಿಂದು ಕೃಷ್ಣನ್
ಸೆಲ್ಜಾ ಕುಮಾರ್
ರಘುವೀರ್ ಮೀನಾ
ಪ್ರೊ. ರಾಘವೇಂದ್ರ ಮುಂಗೇಕರ್
ಮೀನಾಕ್ಷಿ ನಟರಾಜನ್
ರಜನಿ ಪಾಟೀಲ್
ಸ್ಯಾಮ್ ಪಿತ್ರೋಡಾ
ಸಚಿನ್ ರಾವ್
ತಾಮ್ರಧ್ವಜ್ ಸಾಹು
ಮುಕುಲ್ ಸಾಂಗ್ಮಾ
ಶಶಿ ತರೂರ್
ಲಲಿತೇಶ್ ತ್ರಿಪಾಠಿ.