ಸೌತಂಪ್ಟನ್: ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಸವಾಲು ಹಾಕುವ ಸಂಪ್ರದಾಯ ಬಹಳಾನೇ ಬೆಳೆಯುತ್ತಿದೆ.. ತಣ್ಣೀರು ಸುರಿಯುವ ಚಾಲೆಂಜ್.. ಯೋಗ ಮಾಡುವ ಕಸರತ್ತು ಹೀಗೆ ಪ್ರಧಾನಿಯಿಂದ ಹಿಡಿದು ಸೆಲಿಬ್ರಿಟಿಗಳ ವರೆಗೆ ಚಾಲೆಂಜ್ ಸ್ವೀಕರಿಸಿ, ವಿಡಿಯೋ ಅಪ್ಲೋಡ್ ಮಾಡುವ ಹವ್ಯಾಸ ಬೆಳೆಯುತ್ತಲೇ ಇದೆ.
ವಿಷಯ ಅದಲ್ಲ, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಗೊಂದು ಚಾಲೆಂಜ್ ಹಾಕಿದ್ದಾರೆ. ಕೊಹ್ಲಿ ಈ ಚಾಲೆಂಜ್ ಹಾಕಿರುವುದು ಮಾಜಿ ಹಾಗೂ ಹಾಲಿ ಕ್ರಿಕೆಟರ್ಸ್ಗಳಿಗೆ. ಯಾರಾದರೂ ಈ ಚಾಲೆಂಜ್ ಸ್ವೀಕರಿಸಿ ಅತಿ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದೇ ಎಂದು ಚಾಲೆಂಜ್ ಹಾಕಿದ್ದಾರೆ ವಿರಾಟ್ ಕೊಹ್ಲಿ.
ಅವರು ಹಾಕಿರೋದು ಈಜಿ ಸವಾಲು… ಅಂದಹಾಗೆ ಇದರಲ್ಲೇ ಇರೋದು ಟ್ವಿಸ್ಟ್.. ಆ ಟ್ವಿಸ್ಟ್ ಏನಪ್ಪ ಎಂದರೆ ಕೇವಲ ಎಂಟು ಸೆಕೆಂಡ್ಗಳಲ್ಲಿ ವಿವಿಧ ಭಂಗಿಗಳಲ್ಲಿ… ಆರು ಬಾಲ್ಗಳನ್ನ ಮಿಸ್ ಮಾಡದೇ ಹಿಡಿದಿಕೊಳ್ಳಬೇಕು… ಅಂದಹಾಗೆ ಜಸ್ಟ್ ಆರು ಬಾಲು.. ಎಂಟು ಸೆಕೆಂಡ್… ಝೀರೋ ಮಿಸ್… ಇದು ಕ್ರಿಕೆಟರ್ಗಳಿಗೆ ಕೊಹ್ಲಿ ಹಾಕಿರುವ ಸವಾಲು… ಈ ಬಗ್ಗೆ ತಾವೇ ಆಟ ಆಡಿ.. ಅದನ್ನ ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಸವಾಲು ಹಾಕಿದ್ದಾರೆ.
ಈ ಸವಾಲನ್ನ ಅವರು, ದಕ್ಷಿಣ ಆಫ್ರಿಕಾ ಆಟಗಾರ ಹರ್ಷಲ್ ಗಿಬ್ಸ್, ಹಾಲಿ ಇಂಡಿಯನ್ ಕ್ರಿಕೆಟರ್ ಕೆ.ಎಲ್. ರಾಹುಲ್, ಜಾಂಟಿ ರೋಡ್ಸ್, ರಶೀದ್ ಖಾನ್, ಡುಪ್ಲೆಸಿ, ಶಾಕಿಬ್ ಅಲ್ ಹಸನ್ ಅವರಿಗೆ ಈ ಚಾಲೆಂಜ್ ಪಾಸ್ ಮಾಡಿದ್ದಾರೆ.