ಸ್ಯಾಂಡಲ್ವುಡ್ ನ ಸೂಪರ್ ಹಿಟ್ ಕೃಷ್ಣ ಲೀಲಾ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟಿದ್ದ ಮಯೂರಿ ಕ್ಯಾತರಿ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಪುನೀತ್ ಶರ್ಮನ್ ನಿರ್ದೇಶನದ ಚಿತ್ರಕ್ಕೆ ಮಯೂರಿ ಕ್ಯಾತರಿ ಸಹಿ ಹಾಕಿದ್ದಾರೆ. ಪುನೀತ್ ಟಾಲಿವುಡ್ ಖ್ಯಾತ ನಿರ್ದೇಶಕರಾದ ಎಸ್ಎಸ್ ರಾಜಮೌಳಿ, ಪುರಿ ಜಗನ್ನಾದ್ ಮತ್ತು ರಾಮಗೋಪಾಲ್ ವರ್ಮಾ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದ್ದು ಒಂದು ಒಳ್ಳೆಯ ತಂಡದೊಂದಿಗೆ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಮಯೂರಿ ಹೇಳಿದ್ದಾರೆ.
ರಮೇಶ್ ಬಿ ಬಾಬು ಎಂಬುವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಸೋಮವಾರದಿಂದ ಪ್ರಾರಂಭವಾಗಲಿದೆ. ಚಿತ್ರದ ಕಥೆ ಅದ್ಭುತವಾಗಿದ್ದು ಅನಾದ್ಯಂತ ಚಿತ್ರ ನನ್ನ ಜೀವನದ ಅತ್ಯುತ್ತಮ ಚಿತ್ರವಾಗಲಿದೆ ಎಂದರು.
ಚಿತ್ರಕ್ಕೆ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಮಯೂರಿ ಕ್ಯಾತರಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮೌನಂ, ರುಸ್ತುಂ ಹರಿಕೃಷ್ಣ ನಾರಾಯಣಿ ಮತ್ತು ಅನಾದ್ಯಂತ ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ.