ಗೌರಿ ಲಂಕೇಶ್ ಹತ್ಯೆ ಪ್ರಕರಣ: ತನಿಖೆ ಚುರುಕುಗೊಳಿಸಿದ ಎಸ್‍ಐಟಿ

 

ಬೆಂಗಳೂರು,ಆ.25- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಎಸ್‍ಐಟಿ ಅಧಿಕಾರಿಗಳು ಇನ್ನಷ್ಟು ಚುರುಕುಗೊಳಿಸಿದ್ದಾರೆ.
ಈಗಾಗಲೇ ಬಂಧಿತ ಆರೋಪಿಗಳಿಂದ ಹಲವಾರು ಮಾಹಿತಿ ಕಲೆಹಾಕಿ, ಗೌರಿ ಹತ್ಯೆಗೆ ಬಳಸಿದ್ದ ಪಿಸ್ತೂಲ್‍ಗಾಗಿ ಹುಡುಕಾಟ ನಡೆಸಿದ್ದಾರೆ.
ಮಹಾರಾಷ್ಟ್ರದಲ್ಲಿ ಅಗಸ್ಟ್ 10ರಂದು ಪಿಸ್ತೂಲ್ ಇರುವ ಮಾಹಿತಿ ಮೇರೆಗೆ ಆರೋಪಿಗಳಾದ ಸುಧನ್ವ , ಶರದ್, ವೈಭವ್ ಇರುವ ಸ್ಥಳಕ್ಕೆ ಹೋಗಿ ಪೆÇಲೀಸರು ದಾಳಿ ನಡೆಸಿದ್ದರು.

ಆ ಸಂದರ್ಭದಲ್ಲಿ ಎಸ್‍ಐಟಿ 16 ಪಿಸ್ತೂಲ್ ವಶಪಡಿಸಿಕೊಂಡಿತ್ತು. ಪತ್ತೆಯಾಗಿದ್ದ 16 ಪಿಸ್ತೂಲ್ ಪೈಕಿ 15 ಹೊಸದಾಗಿ ಖರೀದಿ ಮಾಡಿರುವ ಅಂಶ ತನಿಖೆಯಲ್ಲಿ ತಿಳಿದುಬಂದಿದೆ.
16 ಪಿಸ್ತೂಲ್ ಪೈಕಿ 15 ಹೊಸದಾದರೆ 1 ಪಿಸ್ತೂಲ್ ಅನ್ನು ಮೂರು ವಿಚಾರವಾದಿಗಳ ಹತ್ಯೆಗೆ ಬಳಸಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಸೇದ್ವಾ ಮತ್ತು ಮಧ್ಯಪ್ರದೇಶದ ಮೂಂಗೇರ್‍ನಲ್ಲಿ ಪಿಸ್ತೂಲ್ ಖರೀದಿ ಮಾಡಿದ್ದು, ಸದ್ಯ 16 ಪಿಸ್ತೂಲ್?ಗಳನ್ನು ಗುಜರಾತ್?ನ ವಿಧಿವಿಧಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಎಫ್‍ಎಸ್‍ಎಲ್ ವರದಿ ಬಂದ ನಂತರ ಗೌರಿ, ದಾಬೋಲ್ಕರ್ ಮತ್ತು ಪನ್ಸಾರೆ ಹತ್ಯೆಗೆ ಬಳಸಿದ್ದ ಪಿಸ್ತೂಲ್ ಪತ್ತೆಯಾಗುವ ಸಾಧ್ಯತೆ ಇದೆ. ಇನ್ನು ಅಗಸ್ಟ್ 28 ರವರೆಗೆ ಆರೋಪಿಗಳು ಮಹಾರಾಷ್ಟ್ರ ಎಸ್‍ಐಟಿ ವಶದಲ್ಲಿದ್ದು, ಎಸ್‍ಐಟಿ ಅವಧಿ ಮುಗಿದ ನಂತರ ಕರ್ನಾಟಕ ಎಸ್‍ಐಟಿ ವಶಕ್ಕೆ ಪಡೆಯಲಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ಹಾಗೆ ಕರ್ನಾಟಕ ಎಸ್‍ಐಟಿ ತಂಡ ಈಗಾಗಲೇ ಮಹಾರಾಷ್ಟ್ರಕ್ಕೆ ತೆರಳಿದ್ದು ಅಲ್ಲೇ ಬೀಡುಬಿಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ