
ಜಕಾರ್ತ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್’ನ ಸ್ಕ್ವ್ಯಾಷ್ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಜೋಶ್ನಾ ಚಿನ್ನಪ್ಪ ಅವರು ಕಂಚಿ ಗೆದ್ದಿದ್ದಾರೆ.
ಇಂದು ನಡೆದ ಸ್ಕ್ವ್ಯಾಷ್ ಮಹಿಳಾ ಸಿಂಗಲ್ಸ್ ನಲ್ಲಿ ಸೆಮಿಫೈನಲ್ ನಲ್ಲಿ ಜೋಶ್ನಾ ಅವರು ಮಲೇಷಿಯಾ ಸ್ಟಾರ್ ಆಟಗಾರ್ತಿ ಶಿವಂಗಂಗರಿ ಅವರ ವಿರುದ್ಧ 1-3ರ ಅಂತರಲ್ಲಿ ಸೋಲು ಕಂಡರು.
ಇದರಿಂದ ಜೋಶ್ನಾ ಅವರು ಏಷ್ಯನ್ ಗೇಮ್ಸ್ ಸ್ಕ್ವ್ಯಾಷ್’ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಮಹಿಳಾ ಸಿಂಗಲ್ಸ್ ನಲ್ಲಿ ಮತ್ತೊಬ್ಬ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರೂ ಕೂಡ ಕಂಚು ಗೆದ್ದಿದ್ದರು. ಇದರಂತೆ ಭಾರತಕ್ಕೆ ಸ್ಕ್ವ್ಯಾಷ್ ವಿಭಾಗದಿಂದ ಒಟ್ಟು 2 ಪದಕಗಳು ಲಭಿಸಿವೆ.