ಪ್ರಧಾನಿ ಮೋದಿ, ಸಿಎಂ ಯೋಗಿ, ವಿಜಯ್‌ ರೂಪಾನಿ ಚಿನ್ನದ ರಾಖಿಗೆ ಭಾರಿ ಬೇಡಿಕೆ

ಸೂರತ್‌:ಆ-25: ರಕ್ಷಾ ಬಂಧನದ ಅಂಗವಾಗಿ ರಾಖಿ ತಯಾರಿಕೆ ಬಲು ಜೋರಾಗಿ ಸಾಗಿದ್ದು, ಗುಜರಾತ್‌ನ ಸೂರತ್‌ನ ಆಭರಣ ಅಂಗಡಿಯೊಂದರಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಮತ್ತು ಗುಜರಾತ್‌ ಸಿಎಂ ವಿಜಯ್‌ ರೂಪಾನಿ ಅವರ ಚಿತ್ರಗಳಿಗಳಿರುವ ಚಿನ್ನದ ರಾಖಿಗೆ ಭಾರಿ ಬೇಡಿಕೆ ಬಂದಿದೆ.

22 ಕ್ಯಾರೆಟ್‌ ಚಿನ್ನದ ಹೊದಿಕೆಯಿಂದ ತಯಾರಿಸಿರುವ ರಾಖಿಗಳು ಹಾಟ್ ಕೇಕ್‌ಗಳಂತೆ ಮಾರಾಟವಾಗುತ್ತಿವೆ. ಪ್ರಧಾನಿ ಮೋದಿ, ಸಿಎಂ ಯೋಗಿ ಮೊದಲಾದ ಬಿಜೆಪಿ ಮುಖಂಡ ಚಿತ್ರವಿರುವ ಒಂದು ಚಿನ್ನದ ರಾಖಿಯ ಬೆಲೆ 50,000 ರೂ ನಿಂದ 70,000 ರೂ ವರೆಗೂ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಸದ್ಯ ತಯಾರಿಸಿದ್ದ 50 ಚಿನ್ನದ ರಾಖಿಗಳಲ್ಲಿ 47 ಈಗಾಗಲೇ ಖರೀದಿಯಾಗಿದ್ದು, ಇನ್ನಷ್ಟು ಬೇಡಿಕೆ ಕೇಳಿ ಬರುತ್ತಿದೆ ಎಂದು ಅಂಗಡಿ ಮಾಲೀಕ ಮಿಲನ್‌ ತಿಳಿಸಿದ್ದಾರೆ.

ನಮ್ಮ ಪ್ರಧಾನಿ, ಗುಜರಾತ್‌ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ದೇಶಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದು, ಅವರಿಂದ ಇಡೀ ವಿಶ್ವಾದ್ಯಂತ ಲಕ್ಷಾಂತರ ಜನ ಸ್ಫೂರ್ತಿ ಪಡೆದುಕೊಂಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Gold Rakhis,PM Modi And Yogi Adityanath’s Pictures

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ