ಬೆಂಗಳೂರು, ಆ.25- ಇತ್ತೀಚೆಗೆ ಬೀಜಿಂಗ್ನಲ್ಲಿ ನಡೆದ ವಿಶ್ವಸಂಸ್ಥೆಯ ಡಬ್ಲ್ಯೂಇ ಮಾಡೆಲ್ ವಸ್ತುಪ್ರದರ್ಶನದಲ್ಲಿ ಬೆಂಗಳೂರಿನ ಇನ್ವೆಂಚರ್ ಅಕಾಡೆಮಿಯ ವಿದ್ಯಾರ್ಥಿಗಳ ತಂಡಕ್ಕೆ ಬೆಸ್ಟ್ ಡೆಲಿಗೇಷನ್ ಪ್ರಶಸ್ತಿ ಲಭಿಸಿದೆ.
ಮೂರು ದಿನಗಳ ಕಾಲ ನಡೆದ ಚರ್ಚೆ, ಸಂವಾದ, ವಿಷಯಮಂಡನೆ ಮುಂತಾದ ವಿಷಯಗಳಲ್ಲಿ ಈ ಪ್ರಶಸ್ತಿ ನೀಡಲಾಯಿತು. ಒಟ್ಟು ಐದು ವಿದ್ಯಾರ್ಥಿಗಳನ್ನು ಬೆಸ್ಟ್ ಡೆಲಿಗೇಟ್ಸ್ ಎಂದು ಗುರುತಿಸಲಾಯಿತು. ಒಬ್ಬ ವಿದ್ಯಾರ್ಥಿಗೆ ಬಹುಮಾನದ ಜತೆಗೆ ಬೆಸ್ಟ್ ಪೆÇಜಿಷನ್ ಪೇಪರ್ ಪ್ರಶಸ್ತಿಯೂ ಲಭಿಸಿತು.
ಚೀನಾದ 110ಕ್ಕೂ ಹೆಚ್ಚು ಶಾಲೆಗಳಿಂದ ಹದಿಹರೆಯದ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಚೀನಾದ ಡಿಪೆÇ್ಲಮಸಿ ಅಸೋಸಿಯೇಷನ್ ವತಿಯಿಂದ ಆಯೋಜಿಸಿಲಾಗಿತ್ತು. ಕಾರ್ಯಕ್ರಮದಲ್ಲಿ ಆ ವಿದ್ಯಾರ್ಥಿಗಳ ಜತೆಗೆ ಭಾರತವನ್ನು ಪ್ರತಿನಿಧಿಸಿ ಹಲವು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದು ವಲ್ಡರ್ï ವೈಡ್ ಫ್ಯೂಚರ್ ಲೀಡರ್ಸ್ ಕಾರ್ಯಕ್ರಮವಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವುದಕ್ಕಾಗಿ ವಿಶೇಷ ಸಮಿತಿ ರಚಿಸಲಾಗಿತ್ತು. ಬೋಸ್ಟನ್ ವಿಶ್ವವಿದ್ಯಾಲಯ, ಚಿಕಾಗೊ ವಿಶ್ವವಿದ್ಯಾಲಯ, ಕಾರ್ನೆಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ಸಮಿತಿಯ ಅಧ್ಯಕ್ಷತೆ ವಹಿಸಿತ್ತು. ಈ ಸಮಿತಿಯು, ಪ್ರಚಲಿತ ಘಟನೆಗಳ ಬಗ್ಗೆ ಬೆಳಕು ಚೆಲ್ಲಿತ್ತು. ಲಿಂಗ ತಾರತಮ್ಯ, ಮಾನವ ಕಳ್ಳಸಾಗಣೆ, ಆಫ್ರಿಕಾ ಖಂಡದಲ್ಲಿರುವ ವಿವಿಧ ಸಂಪ್ರದಾಯಗಳ ನಡುವಿನ ಸಂಘರ್ಷ, ಭವಿಷ್ಯದ ನಗರೀಕರಣದ ಮೂಲ ಸೌಕರ್ಯಗಳು ಮತ್ತು ವಲಸೆಯಂತಹ ಗಂಭೀರ ಸಮಸ್ಯೆಗಳ ಕುರಿತು ಗಮನ ಹರಿಸಲಾಗಿತ್ತು ಎಂದು ಇನ್ವೆಂಚರ್ಸ್ ಅಕಾಡೆಮಿಯ ಸಂಸ್ಥಾಪಕ ಕಾರ್ಯನಿರ್ವಹಣಾಧಿಕಾರಿ ಮತ್ತು ನಿರ್ವಾಹಕ ಟ್ರಸ್ಟಿಯಾದ ನೂರಿನೆ ಫಜಲ್ ತಿಳಿಸಿದರು.