
ಜಕಾರ್ತಾ: 18ನೇ ಏಷ್ಯನ್ ಗೇಮ್ಸ್ ಮಹಿಳಾ ಸಿಂಗಲ್ಸ್ ಸ್ಕ್ವ್ಯಾಷ್’ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಶನಿವಾರ ಕಂಚು ಗೆದ್ದಿದ್ದಾರೆ.
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್’ನ 7ನೇ ದಿನದ ಮಹಿಳಾ ಸಿಂಗಲ್ಸ್ ಸ್ಕ್ವ್ಯಾಷ್ ಸಿಂಗಲ್ ಸೆಮಿಫೈಲನ್ಸ್ ನಲ್ಲಿ ದೀಪಿಕಾ ಅವರು, ಮಲೇಷ್ಯಾ ಆಟಗಾರ್ತಿ ನಿಕೋಲ್ ಡೇವಿಡ್ ವಿರುದ್ಧ ಸೋತಿದ್ದರಿಂದ ಕಂಚಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.
ದೀಪಿಕಾ ಅವರ ಕಂಚಿನ ಪದಕದೊಂದಿಗೆ ಭಾರತದ ಪದಕ ಪಟ್ಟಿಯಲ್ಲಿ ಒಟ್ಟು 26 ಪದಕಗಳು ಸೇರ್ಪಡೆಗೊಂಡಿದ್ದು, ಭಾರತ ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ನಿನ್ನೆ ನಡೆದ ಪುರುಷರ ಟೆನಿಸ್ ಡಬಲ್ಸ್ ಫೈನಲ್ ನಲ್ಲಿ ಭಾರತದ ಬೋಪಣ್ಣ-ಶರಣ್ ಜೋಡಿ ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್-ಡೆನಿಸ್ ಯೆವ್ಸೇವ್ ಜೋಡಿಯನ್ನು 6-3, 6-4ರ ನೇರ ಸೆಟ್’ನಿಂದ ಸೋಲಿಸಿ ಚಿನ್ನದ ಪದಕ ಗೆದ್ದಿತ್ತು.