20 ಹುತಾತ್ಮ ಕುಟುಂಬಕ್ಕೆ ತಲಾ 1 ಕೋಟಿ ರುಪಾಯಿ ಪರಿಹಾರ: ದೆಹಲಿ ಸರ್ಕಾರ ನಿರ್ಧಾರ

ನವದೆಹಲಿ:ಆ-25: ಕರ್ತವ್ಯ ನಿರತ ಸಿಬ್ಬಂದಿಗಳ ನೈತಿಕತೆಯನ್ನು ಹೆಚ್ಚಿಸುವ ಸಲುವಾಗಿ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಬಿಎಸ್ಎಫ್, ದೆಹಲಿ ಪೊಲೀಸ್ ಮತ್ತು ದೆಹಲಿ ಅಗ್ನಿಶಾಮಕ ದಳದ 20 ಹುತಾತ್ಮ ಕುಟುಂಬಕ್ಕೆ ತಲಾ 1 ಕೋಟಿ ರುಪಾಯಿ ಪರಿಹಾರ ನೀಡಲು ನಿರ್ಧರಿಸಿದೆ.

20 ಹುತಾತ್ಮರ ಕುಟುಂಬಗಳನ್ನು ಸರ್ಕಾರ ಗುರುತಿಸಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋದರ ಬಲಿದಾನ ಅಮೂಲ್ಯವಾಗಿದ್ದು. ದೇಶ ಅವರಿಗೆ ಯಾವಾಗಲು ಋಣವಾಗಿರುತ್ತದೆ ಎಂದು ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.

ಅದೇ ರೀತಿ ನಾವು ಹುತಾತ್ಮ ಯೋಧರಿಗೆ ನೆರವಾಗಲು ಅವರ ಕುಟುಂಬಕ್ಕೆ 1 ಕೋಟಿ ರುಪಾಯಿ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.

2015ರ ಏಪ್ರಿಲ್ 1ರಂದು ಈ ಯೋಜನೆಯನ್ನು ಮಂಡಿಸಿದ ಸರ್ಕಾರಕ್ಕೆ ಜುಲೈ 25ರಂದು ಅನುಮೋದನೆ ದೊರೆತಿತ್ತು.

AAP government, to give Rs 1 crore, each to kin of 20 martyrs

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ