ಸ್ವಿಂಗ್ ಕಿಂಗ್ ಭುವನೇಶ್ವರ್ ಅಲ್ಲ…ಯಾರ್ಕರ್ ಸ್ಪೆಶಲಿಸ್ಟ್ ಜಸ್ಪ್ರೀತ್ ಬೂಮಾನ್ರೂ ಅಲ್ಲ ಈಕೆಯೆ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿದ್ದಾಳೆ.
ಈ ಆಟಗಾರ್ತಿ ಬೇರೆ ಯಾರು ಅಲ್ಲ ಮೊನ್ನೆಯಷ್ಟೆ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ ಜುಲ್ಹಾನ್ ಗೋಸ್ವಾಮಿ. 35 ವರ್ಷದ ಜುಲ್ಹಾನ್ ಗೋಸ್ವಾಮಿ ತಮ್ಮ ವರ್ಷಗಳ ಟಿ20 ಕ್ರಿಕೆಟ್ ಬದುಕಿನಲ್ಲಿ 56 ವಿಕೆಟ್ ಪಡೆದಿದ್ದರೆ.
ಪುರುಷರ ಮತ್ತು ಮಹಿಳೆಯರ ರೆಕಾರ್ಡ್ಗಳನ್ನ ಹೋಲಿಕೆ ಮಾಡಿದಾಗ ಚುಟುಕು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಟೀಂ ಇಂಡಿಯಾದ ಕೇರಂ ಸ್ಪಿನ್ನರ್ ಆರ್.ಅಶ್ವಿನ್, ಟಿ20ಯಲ್ಲಿ 46 ಪಂದ್ಯಗಳಿಂದ 52 ವಿಕೆಟ್ ಪಡೆದಿದ್ದಾರೆ. ಜುಲ್ಹಾನ್ ಗೋಸ್ವಾಮಿಗಿಂತ ನಾಲ್ಕು ವಿಕೆಟ್ ಹಿಂದಿದ್ದಾರೆ. ಭಾರತ ಪರ ಆರ್.ಅಶ್ವಿನ್ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿದ್ದಾರೆ. ನಂತರದ ಸ್ಥಾನದಲ್ಲಿ ಮಹಿಳಾ ತಂಡದ ಆಟಗಾರ್ತಿಯರಾದ ಪೂನಮ್ ಯದವ್ (53) ಮತು ಏಕ್ತಾ ಬಿಸ್ಟ್ (50) ವಿಕೆಟ್ ಪಡೆದು ನಾಲ್ಕನೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳೆನಿಸಿದ್ದಾರೆ.
ಇನ್ನು ಪುರುಷರ ವಿಭಾಗದಲ್ಲಿ ಬೂಮ್ ಬೂಮ್ ಬೂಮ್ರಾ 35 ಟಿ20 ಪಂದ್ಯಗಳಿಂದ 43 ವಿಕೆಟ್ ಪಡೆದಿದ್ದಾರೆ. ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ 26 ಪಂದ್ಯಗಳಿಂದ 42 ವಿಕೆಟ್ ಪಡೆದಿದ್ದಾರೆ.
ಎಲ್ಲಿಯವರೆಗೆ ಕೇರಂ ಸ್ಪಿನ್ನರ್ ಆರ್.ಅಶ್ವಿನ್ ಚುಟಕು ಕ್ರಿಕೆಟ್ ಸರಣಿ ಆಡುವ ಟೀಂ ಇಂಡಿಯಾಕ್ಕೆ ಬರೋದಿಲ್ಲವೋ ಅಲ್ಲಿಯವರಗೆ ಜುಲ್ಹಾನ್ ಅಗ್ರ ಸ್ಥಾನದಲಲಿಯೇ ಮುಂದುವರಿಯುತ್ತಾರೆ.