ಲಂಡನ್:ಆ-25: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತದ ಸಂಸತ್ತಿನಲ್ಲಿ ಕಳಪೆ ಚರ್ಚೆಗಳು ನಡೆಯುತ್ತವೆ ಎನ್ನುವ ಮೂಲಕ ವಿದೇಶಿ ನೆಲದಲ್ಲಿ ದೇಶದ ಸಂಸತ್ತಿಗೆ ಅಪಮಾನ ಮಾಡಿದ್ದಾರೆ.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ಸಂಸತ್ತಿನ ಸದಸ್ಯರು ಕಾನೂನು ರೂಪಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ, ಎಲ್ಲ ಕಾನೂನುಗಳು ಪ್ರಧಾನಿ ಕಚೇರಿಯಲ್ಲಿಯೇ ಮಾಡಲ್ಪಡುತ್ತವೆ. ಈ ಮೂಲಕ ಭಾರತದ ಸಂಸತ್ತಿನಲ್ಲಿ ಸಮರ್ಪಕ ಚರ್ಚೆಗಳೇ ನಡೆಯುತ್ತಿಲ್ಲ ಎಂದಿದ್ದಾರೆ.
ಭಾರತೀಯ ಸಂಸತ್ತಿನಲ್ಲಿ ಚರ್ಚೆಯ ಗುಣಮಟ್ಟವನ್ನು ನೀವು ಗಮನಿಸಿದ್ದೀರಾ? ಅದನ್ನು ನೋಡಿದರೆ ನಿಮಗೆ ಹೆಮ್ಮೆಯಾಗುತ್ತದೆಯಾ? ಎಂತಹ ಕಳಪೆ ಚರ್ಚೆ?. ನಾವು ನೂರಾರು ಅನುಭವಿ ಸಂಸದರನ್ನು ಹೊಂದಿದ್ದೇವೆ. ಆದರೆ ಚರ್ಚೆ ಮಾತ್ರ ನಾವು ನಿರೀಕ್ಷಿಸಿದಂತಿರುವುದಿಲ್ಲ. ಅದೇ 50, 60 ರ ದಶಕದ ಸಂಸತ್ತನ್ನು ಅವಲೋಕಿಸಿದರೆ ವ್ಯತ್ಯಾಸ ಸ್ಪಷ್ಟ”.
ತಮ್ಮ ಮಾತಿನ ನಡುವೆ ಮೋದಿಯನ್ನು ಎಳೆದು ತಂದ ರಾಹುಲ್ ಅವರ ಕಚೇರಿಯಲ್ಲೇ ಕಾನೂನುಗಳಾಗುತ್ತವೆ. ನಾವು ಕಾನೂನು ರೂಪಿಸುವ ಅಧಿಕಾರವನ್ನು ಸಂಸದರಿಗೆ ನೀಡಬೇಕು. ಆಗ ಚರ್ಚೆಯ ಗುಣಮಟ್ಟ ಬದಲಾಗಬಹುದು ಎಂದರು.