ಭಾರತ ಮಹಿಳಾ ಕಬಡ್ಡಿ ತಂಡ ಸೋಲಲು ಭಾರತೀಯರೇ ಕಾರಣ..!

ಜಕಾರ್ತ :  ಈ ಬಾರಿ  ಏಷ್ಯನ್  ಗೇಮ್ಸ್ ನಲ್ಲಿ  ಇರಾನ್ ಕಬಡ್ಡಿ  ತಂಡ  ಚಿನ್ನದ  ಪದಕ ಗೆದ್ದು  ಬೀಗಿದೆ. ಪ್ರತಿ  ಬಾರಿಯೂ  ಫೈನಲ್  ಪಂದ್ಯದಲ್ಲಿ  ಭಾರತದ  ಎದುರು  ಮಂಡಿಯೂರುತ್ತಿದ್ದ  ಇರಾನ್ ಮಹಿಳಾ ಮತ್ತು  ಪುರುಷರ ತಂಡ  ಈ ಬಾರಿ  ಭಾರತದ ಮೇಲೆ  ಸವಾರಿ ಮಾಡಿದೆ.

ಭಾರತ  ಮಹಿಳಾ ಕಬಡ್ಡಿ  ತಂಡ  ಸೋಲಲು ಕಾರಣವಾಗಿದ್ದು ಇರಾನ್​ ತಂಡದ  ಕೋಚ್  ಶೈಲಜಾ.  ಶೈಲಜಾರಂತ ಕೋಚ್​ನ್ನ ಅವಕಾಶ ಕೊಡದೇ ಇರೋದೇ ಭಾರತದ  ಸೋಲಿಗೆ  ಕಾರಣವಾಗಿದೆ.

1990ರ  ನಂತರ  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಯಾವಾಗ ಕಬಡ್ಡಿಯನ್ನ    ಕ್ರೀಡಾಕೂಟದಲ್ಲಿ  ಸೇರಿಸಿಕೊಳ್ಳಲಾಯಿತೋ ಅಂದಿನಿಂದ  ಭಾರತ  ಪುರುಷ ಮತ್ತು  ಮಹಿಳಾ  ತಂಡಗಳು ಚಿನ್ನ  ಪದಕಗಳನ್ನ  ಹಿಡಿದು  ಭಾರತಕ್ಕೆ ಮರಳುತ್ತಿತ್ತು.  ಆದರೆ ಈ ಬಾರಿ ಭಾರತ ಮಹಿಳಾ ಕಬಡ್ಡಿ ತಂಡ  ಬಲಿಷ್ಠ  ಇರಾನ್​ ವಿರುದ್ಧ ಫೈನಲ್  ಪಂದ್ಯದಲ್ಲಿ   24-27 ಅಂಕಗಳ ಅಂತರದಿಂದ ಸೋತು  ಏಷ್ಯನ್​ ಗೇಮ್ಸ್ ನಲ್ಲಿ  ಮೂರನೇ ಬಾರಿಗೆ ಚಿನ್ನ  ಮಿಸ್​ ಮಾಡಿಕೊಂಡು ಭಾರೀ  ನಿರಾಸೆ ಅನುಭವಿಸಿದೆ.  ಇದಕ್ಕೆ  ಕಾರಣ ಇರಾನ್  ತಂಡದ  ಕೋಚ್  ಶೈಲಜಾ  ಜೈನ್ .  ಭಾರತದ  ಶೈಲಜಾ ಜೈನ್  ನಾಸಿಕ್  ಊರಿನವರು.

62 ವರ್ಷದ  ಶೈಲಜಾ ಜೈನ್ ಕಳೆದ  ಮೂರು  ದಶಕಗಳಿಂದ ಮಹಾರಾಷ್ಟ್ರದಲ್ಲಿ ನೂರಾರು  ಮಕ್ಕಳಿಗೆ ಕಬಡ್ಡಿ  ತರಬೇತಿ ನೀಡುತ್ತಾ ಬಂದಿದ್ರು. ಆದರೆ  ಶೈಲಜಾಗೆ ಒಂದು  ಬಾರಿ ಕೂಡ  ರಾಷ್ಟ್ರೀಯ ತಂಡಕ್ಕೆ  ಕೋಚ್​ ಆಗಿ  ಕಾರ್ಯನಿರ್ವಹಿಸಲು  ಅವಕಾಶ  ಕೊಟ್ಟಿರಲಿಲ್ಲ.  ಇದು  ಶೈಲಜಾಗೆ  ಬೇಸರ  ತರಿಸಿತ್ತು.

ಕಳೆದ ವರ್ಷ  ಇರಾನ್  ಕಬಡ್ಡಿ  ಮಂಡಳಿ ಕೋಚ್  ಶೈಲಜಾಗೆ  ರಾಷ್ಟ್ರೀಯ  ಮಹಿಳಾ  ತಂಡಕ್ಕೆ  ಕೋಚ್  ಆಗಲು ಆಹ್ವಾನ ನೀಡಿತು.  ಶೈಲಜಾ ಹಿಂದು ಮುಂದು ನೋಡದೇ  ಒಪ್ಪಿಕೊಂಡರು.  ಈ ಬಾರಿಯ ಏಷ್ಯನ್  ಗೇಮ್ಸ್ ನಲ್ಲಿ  ಇರಾನ್  ತಂಡಕ್ಕೆ    ಒಳ್ಳೆಯ ತರಬೇತಿ ಕೊಟ್ಟು  ಭಾರತ ತಮಡಕ್ಕೆ  ಸರ್​ಪ್ರೈಸ್ ಕೊಟ್ಟರು.

ಈ ಬಗ್ಗೆ ಮತನಾಡಿರುವ ಶೈಲಜಾ  ನಾನು ಮೊದಲ ಬಾರಿಗೆ ಇರಾನ್​ಗೆ  ಭೇಟಿಕೊಟ್ಟಾಗ  ನಾನು ಒಳ್ಳೆಯ ಕೋಚ್​ ಅನ್ನೋದನ್ನ ಸಾಬೀತು ಮಾಡಬೇಕಿತ್ತು.  ಅದರ ಫಲಿತಾಂಶವನ್ನ  ಈಗ ನೋಡಿದ್ದೇನೆ.  ಫೈಲ್​ಗೂ ಮುನ್ನ  ತಂಡದ ಆಟಗಾರ್ತಿಯರಿಗೆ  ಚಿನ್ನ ಗೆಲ್ಲದೇ ನನ್ನನ್ನ ಭಾರತಕ್ಕೆ  ವಾಪಸ್​ ಕಳುಹಿಸಬೇಡಿ  ಎಂದು  ಹೇಳಿದ್ದೆ.

ಮೊದಲು ನಾನು ಮಾಡಿದ  ಕೆಲಸ ಎಂದರೆ  ವಾಟ್ಸ್​ಅಪ್​ ನಲ್ಲಿ   ಕಬಡ್ಡಿ  ಗ್ರೂಪ್  ಶುರುಮಾಡಿದೆ.  ಪ್ರತಿದಿನ ಬೆಳಗ್ಗೆ  ಆಡಲು  ಸ್ಫೂರ್ತಿಯಾಗುವಂತ  ಮೆಸೇಜ್​ಗಳನ್ನ ಹಾಕುತ್ತಿದ್ದೆ  ಒಬ್ಬಳು ಆಟಗಾರ್ತಿ ಅನುವಾದ ಮಾಡುತ್ತಿದ್ದಳು.  42 ಆಟಗಾರ್ತಿಯರಿಗೆ ತರಬೇತಿ ಕೊಟ್ಟು  13 ಆಟಗಾರ್ತಿಯರನ್ನ  ಏಷ್ಯಾನ್ ಕ್ರೀಡಾಕೂಟಕ್ಕೆ ಆಯ್ಕೆಮಾಡಿದೆ.

ಬೇರೆ ಭಾರತೀಯರಂತೆ  ಭಾರತ ತಂಡ  ಸೋತಿದಕ್ಕೆ ನನಗೆ ಬೇಸರವಿದೆ. ನಾನು ನನ್ನ  ದೇಶವನ್ನ  ತುಂಬ ಪ್ರೀತಿಸುತ್ತೇನೆ ಎಂದಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ