ನವದೆಹಲಿ: 2013ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖಾಧಿಕಾರಿ ಬಿಬಿ ಮಿಶ್ರಾ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದ್ದು ಇದೀಗ ಕ್ರಿಕೆಟ್ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
2011ರ ಏಕದಿನ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಅಗ್ರಗ ಆಟಗಾರನೊಬ್ಬ 2008-09ರಲ್ಲಿ ಬುಕ್ಕಿ ಜತೆ ಸಂಪರ್ಕ ಹೊಂದಿದ್ದರು ಎಂದು ಮಿಶ್ರಾ ಹೇಳಿದ್ದಾರೆ. ಆದರೆ ಆಟಗಾರನ ಹೆಸರನ್ನು ಅವರು ಬಹಿರಂಗಪಡಿಸಿಲ್ಲ.
ಬುಕ್ಕಿ ತಾನು ಆಟಗಾರನೊಂದಿಗೆ ಸಂಪರ್ಕ ಹೊಂದಿದ್ದಾಗಿ ಒಪ್ಪಿಕೊಂಡಿದ್ದ. ಅವರಿಬ್ಬರ ನಡುವಿನ ದೂರವಾಣಿ ಸಂಭಾಷಣೆಯ ಕ್ಲಿಪ್ ನೀಡುವುದಾಗಿ ಹೇಳಿದ್ದ. ಆದರೆ ಸಮಯದ ಅಭಾವದಿಂದ ತನಿಖೆ ನಡೆಸಲು ಸಾಧ್ಯವಾಗಲಿಲ್ಲ.
ಜೊತೆಗೆ ಕೇವಲ ಐಪಿಎಲ್ ಪ್ರಕರಣದ ತನಿಖೆಯಷ್ಟೇ ನಡೆಸಲು ಆದೇಶ ಇದ್ದಿದ್ದರಿಂದ 2008-09ರ ಪಂದ್ಯದ ವೇಳೆ ನಡೆದಿದೆ ಎನ್ನಲಾದ ಪ್ರಕರಣದ ತನಿಖೆ ನಡೆಸಲು ನನಗೆ ಅವಕಾಶ ಸಿಗಲಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.