ಬೆಂಗಳೂರು: ದಮಯಂತಿ ಶೀರ್ಷಿಕೆಯೇ ನನಗೆ ಈ ಪ್ರಾಜೆಕ್ಟ್ ಗೆ ಸಹಿ ಮಾಡುವಂತೆ ಆಕರ್ಷಿಸಿತು. 1980 ರ ದಶಕದ ರೀತಿಯ ಕಥೆ ಇದಾಗಿದ್ದು, ಹಾಸ್ಯಭರಿತ ಭಯಾನಕ ಸಿನಿಮಾವಾಗಿದೆ. ದಮಯಂತಿ ಹೆಸರಿಗೆ ಆಕರ್ಷಿತವಾಗಿ ನಾನು ಸಹಿ ಹಾಕಿದ್ದೇನೆ , ಈ ಪಾತ್ರಕ್ಕೆ ನಾನು ಸೂಕ್ತ ಎಂದು ನನಗನ್ನಿಸುತ್ತದೆ ಎಂದು ಹೇಳಿದ್ದಾರೆ.
ತಮಿಳು ನಟ ವಿಶಾಲ್ ತಂದೆ ಈ ಸಿನಿಮಾದಲ್ಲಿ ರಾಧಿಕಾ ತಂದೆಯಾಗಿ ಪಾತ್ರ ಮಾಡುತ್ತಿದ್ದು, ಅವರಿಗಾಗಿ ನಾನು ಈ ಪಾತ್ರ ಮಾಡಲು ಒಪ್ಪಿಕೊಂಡೆ ಎಂದು ರಾಧಿಕಾ ತಿಳಿಸಿದ್ದಾರೆ, ಜಿಕೆ ರೆಡ್ಡಿ ಅವರಿಗಾಗಿ ನಾನು ಈ ಪಾತ್ರಕ್ಕೆ ಸಹಿ ಮಾಡಿದೆ ಎಂದು ಹೇಳಿದ್ದಾರೆ.
ಇದೊಂದು ನಾಯಕಿ ಪ್ರಧಾನ ಸಿನಿಮಾವಾಗಿದ್ದು, ದಕ್ಷಿಣ ಭಾರತ ಭಾಷೆಗಳಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ನಿರ್ಮಿಸಲಾಗುತ್ತಿದೆ. ಜೊತೆಗೆ ಉತ್ತಮ ಗ್ರಾಫಿಕ್ಸ್ ಕೂಡ ಅಳವಡಿಸಲಾಗುತ್ತಿದೆ,
ನಾಯಕಿಗಾಗಿ ಹುಡುಕಾಟ ನಡೆಸುತ್ತಿರುವಾಗ ನಿರ್ದೇಶಕ ಮತ್ತು ನಿರ್ಮಾಪಕ ನವರಸನ್ ರಾಧಿಕಾ ಅವರಿಗೆ ಈ ಪ್ರಾಜೆಕ್ಟ್ ಗೆ ಸೂಚಿಸಿದ್ದಾರೆ. ಸೆಪ್ಟಂಬರ್ ತಿಂಗಳಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ, ಸಾಧು ಕೋಕಿಲಾ, ತಬಲ ನಾಣಿ, ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ.